ರಾಜ್ಯದಲ್ಲಿ ಅಗತ್ಯಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ಸರ್ಕಾರದ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.
ಈ ವೇಳೆ ಕಾಂಗ್ರೆಸ್ ಭವನದಲ್ಲಿ ಮಾತಾನಾಡಿದ ಅವರು, ನನಗೆ ಯಾಕೋ ಅನುಮಾನ ಬರ್ತಿದೆ
ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ಆಗುತ್ತಿದೆ. ವಿದ್ಯುತ್ ಇಲಾಖೆಯನ್ನ ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ. ಕೃತಕ ಅಭಾವ ಸೃಷ್ಟಿಸುವ ಪ್ರಯತ್ನ ಮಾಡ್ತಿದ್ದಾರೆಂದು ಅನುಮಾನ ಎಂದರು.
ನಾವು ಖಾಸಗೀಕರಣಕ್ಕೆ ವಿರೋಧ ಇದ್ದೇವೆ ರೈತರ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಕೊಡುತ್ತಿದ್ದೇವೆ, ಖಾಸಗೀಕರಣ ಮಾಡಿದ್ರೆ ರೈತರಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಕೊಡ್ತಾರಾ? ಎಂದರು. ಇನ್ನೂ ಬಡವರು, ರೈತರ ಮೇಲಿನ ತೆರಿಗೆ ಕಡಿಮೆ ಮಾಡ್ಲಿ,ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ.
ಅದಾನಿ, ಅಂಬಾನಿ ಮೇಲೆ ತೆರಿಗೆ ಹಾಕಿ, ಕೋವಿಡ್ ಕಾರಣ ಯಾಕೆ ಹೇಳ್ತಿರಾ?
ಆದಾಯ ಜಾಸ್ತಿ ಆದವರ ಮೇಲೆ ತೆರಿಗೆ ಹಾಕಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ಡೀಸಲ್, ಪೆಟ್ರೋಲ್ ಕೊಡಿ ಎಂದು ಹೇಳಿದರು.