ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ಹಗರಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹಗರಣದಿಂದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಕೇಸಿನಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ರಾಜ್ಯ ಸರ್ಕಾರ ಈ ಕೇಸನ್ನ ಎಸ್ಐಟಿಗೆ ಒಪ್ಪಿಸಿದ್ದರೆ, ಇಡಿ ಕೂಡ ಸ್ವಯಂ ಆಗಿ ಕೇಸನ್ನು ಹ್ಯಾಂಡಲ್ ಮಾಡುತ್ತಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಎಸ್ಐಟಿ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಅದರಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಆದರೆ ಈಗ ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಎಲ್ಲವೂ ಉಲ್ಟಾ ಆಗಿದೆ.
ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಗರಣದಲ್ಲಿ ನಾಗೇಂದ್ರ ಅವರ ಕೈವಾಡ ಇರುವುದು ಪ್ರೂವ್ ಆಗಿದೆ. ಇಡಿ ಒಟ್ಟು 5,114 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಅದರಲ್ಲಿ 15 ಸಾಕ್ಷಿಗಳನ್ನು ಉಲ್ಲೇಖಿಸಿದೆ. 20 ಜನರ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಿದೆ. ನಿಗಮದ 20 ಕೋಟಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ. ಚುನಾವಣೆಯ ಹೊತ್ತಲ್ಲಿಯೇ ತೆಲಂಗಾಣ ಮದ್ಯ ಖರೀದಿಗೆ ಇಷ್ಟೊಂದು ಹಣ ಬಳಕೆ ಆಗಿರುವುದು. ಬಿ.ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೊಬೈಲ್ ನಲ್ಲಿ ಸಿಕ್ಕಿರುವ ಸಾಕ್ಷಿಗಳಿಂದ ಇದು ರುಜುವಾತಾಗಿದೆ. ಚಾರ್ಜ್ ಶೀಟ್ ನಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಬಿ ನಾಗೇಂದ್ರ ಅವರು ಸಹಚರರ ಜೊತೆಗೂಡಿ ಕೆಲವು ಖಾಸಗಿ ಸಭೆಗಳನ್ನು ನಡೆಸಿದ್ದರು. ಹಣ ಹೊಡೆಯಲು ಹೊಸ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದರು. ನಿಗಮಕ್ಕೆ ಪದ್ಮನಾಭ ಎಂಬುವವರ ನೇಮಕ ಮಾಡುವುದರಲ್ಲಿ ನಾಗೇಂದ್ರ ಅವರದ್ದು ಪ್ರಮುಖ ಪಾತ್ರವಾಗಿತ್ತು. ಬ್ಯಾಂಕ್ ಖಾತೆ ತೆರೆಯಲು ಪದ್ಮನಾಭ ಅವರುಗೆ ಸೂಚನೆ ನೀಡಲಾಗಿತ್ತು ಎಂಬ ವಿಚಾರಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿವೆ.