ರಾಮನಗರ: ಕಳೆದ ಕೆಲವು ತಿಂಗಳ ಹಿಂದೆ ನಮ್ಮ ಮಂತ್ರುಗಳು ಅಂದ್ರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗ್ತಾರೆ ಎಂಬ ಮಾತನ್ನ ಹೇಳಿದ್ದರು. ಇದೀಗ ರಾಮನಗರ ಶಾಸಕ ಇಕ್ಬಾಲ್ ಅವರು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನ ಒಪ್ಪಿಕೊಂಡಿದ್ದಾರೆ.
ಹೈಕಮಾಂಟ್ ಸೂಚನೆ ಮೇರೆಗೆ ಈಗಾಗಲೇ ಸಿಎಂ ಮನೆಯಲ್ಲಿ ಡಿಕೆಶಿ, ಡಿಕೆಶಿ ಮನೆಯಲ್ಲಿ ಸಿದ್ದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಕ್ಬಾಲ್, ವೆಜ್ ಆಯ್ತು, ನಾನ್ ವೆಜ್ ಕೂಡ ಆಯ್ತು ಎಲ್ಲರು ಸಮಾಧಾನವಾಗಿ ಇದ್ದಾರೆ ಎಂಬುದು ಕೂಡ ಅರ್ಥವಾಯ್ತು. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಹೈಕಮಾಂಡ್ ಏನೇ ತೀರ್ಮಾನ ಇದ್ದರೂ ಅದನ್ನ ನಾವೇ ಮಾಡಿತ್ತೇವೆ ಎಂದು ಹೇಳಿದೆ. ಇದೆಲ್ಲಿ ಇನ್ನೂ ಯಾವುದೇ ಗೊಂದಲ ಉಳಿದಿಲ್ಲ. ಇಡ್ಕಿ, ನಾಟಿಕೋಳಿ ಎಲ್ಲರೂ ಸಮಾನರು ಇದನ್ನ ಅರ್ಥ ಮಾಡಿಸಿದೆ ಎಂದಿದ್ದಾರೆ.
ಇದೆ ವೇಳೆ ಸಿದ್ದರಾಮಯ್ಯ ಅವರು ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಇದರಲ್ಲಿ ಯಾವುದೇ ವೈರಾಗ್ಯ ಇಲ್ಲ. ಇದು ಸಹಜ ಅಲ್ವಾ..? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನನಗೂ ಅಧಿಕಾರ ಶಾಶ್ವತ ಅಲ್ಲ. ಹಿಂದೆ ಇದ್ದ ಕುಮಾರಸ್ವಾಮಿಗೆ ಅಧಿಕಾರ ಶಾಶ್ವತ ಇತ್ತಾ..? ಕೇವಲ ಅಧಿಕಾರ ಮಾತ್ರವಲ್ಲ, ಪ್ರಪಂಚವೇ ಯಾರಿಗೂ ಶಾಶ್ವತ ಅಲ್ಲ. ಎಲ್ಲದಕ್ಕೂ ಒಂದು ಕೊನೆ ಇರುತ್ತದೆ. ನಮ್ಮ ಸಿಎಂ ಅರ್ಥಬದ್ಧವಾದ ಮಾತನ್ನೇ ಹೇಳಿದ್ದಾರೆ ಎಂದಿದ್ದಾರೆ. ಈ ಮೂಲಕ ಸದ್ಯ ತಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ.
