ಬೆಂಗಳೂರು: ಎಸ್ಎಸ್ಎಲ್ಸಿ, ಪಿಯುಸಿ ಈ ಹಂತ ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಇದ್ದಂಗೆ. ಈ ಹಂತದಲ್ಲಿ ಅಂಕಗಳು ತುಂಬಾ ಮುಖ್ಯವಾಗುತ್ತೆ. ಆದರೆ ಪರೀಕ್ಷೆ ಹತ್ತಿರವಿದ್ದರು, ಹಿಜಾಬ್ ವಿವಾದ ಕೊನೆಗಾಣುವ ಲಕ್ಷಣವೇ ಕಾಣುತ್ತಿಲ್ಲ. ಇದೀಗ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣದ ಇಲಾಖೆ ಮಹತ್ವದ ಆದೇಶವೊಂದು ಹೊರ ಬಿದ್ದಿದೆ.
ಸರ್ಕಾರದ ಆದೇಶ ಪಾಲನೆ ಮಾಡದೆ ಹೋದರೆ ಪ್ರಾಯೋಗಿಕ ಪರೀಕ್ಷೆಗಳಿಗೆ ಅವಕಾಶ ನೀಡಲ್ಲ ಎಂದು ಆದೇಶ ಹೊರಡಿಸಿದೆ. ಇನ್ನು ಪರೀಕ್ಷೆಗೆ ಹಾಜರಾಗದೆ ಹೋದರೆ ಯಾವ ವಿದ್ಯಾರ್ಥಿನಿಗೂ ರಿಯಾಯಿತಿ ಸಿಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಹಿಜಾಬ್ ಗಲಾಟೆಯಲ್ಲಿ ಪರೀಕ್ಷೆ ಬರೆಯದೆ ಹೋದ್ರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿಲ್ಲ. ನಾಳೆಯಿಂದ ಪರೀಕ್ಷೆಗಳು ಆರಂಭವಾಗುತ್ತಿವೆ. ಹೀಗಾಗಿ ಗಲಾಟೆ, ಹಠ ಬಿಟ್ಟು ಮೊದಲು ಪರೀಕ್ಷೆ ಬರೆಯಿರಿ ಎಂದು ಶಿಕ್ಷಕರು ಮಕ್ಕಳಿಗೆ ಸಲಹೆ ನೀಡಿದ್ದಾರೆ.