ಇಂದು ಶ್ರೀಲಂಕಾದಲ್ಲಿ ಭಾರತ – ಪಾಕಿಸ್ತಾನದ ಪಂದ್ಯ ನಡೆಯುತ್ತಿದೆ. ಭಾರತ – ಪಾಕಿಸ್ತಾನದ ಪಂದ್ಯ ಎಂದರೆ ಅದು ಹೈವೋಲ್ಟೇಜ್ ಪಂದ್ಯವಾಗಿರುತ್ತದೆ. ಬೇರೆ ಯಾವ ಮ್ಯಾಚ್ ಗೂ ಸೇರದಷ್ಟು ಅಭಿಮಾನಿಗಳು ಈ ಪಂದ್ಯಕ್ಕೆ ಸೇರಿರುತ್ತಾರೆ. ಆದರೆ ಇವತ್ತಿನ ಮ್ಯಾಚ್ ನಲ್ಲಿ ಪ್ರೇಕ್ಷಕರ ಗ್ಯಾಲರಿ ಖಾಲಿ ಇದ್ದದ್ದು ಕಂಡು ಬಂದಿದೆ.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ 16ನೇ ಸೀಸನ್ ನಲ್ಲಿ ಇಂಥಹ ಕೆಲವು ದೃಶ್ಯಗಳು ಕಂಡು ಬಂದಿದೆ. ಸೂಪರ್-4 ಸ್ಪರ್ಧೆ ಮುಂದುವರೆದಿದ್ದು, ಕೊಲಂಬೋದಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿದ್ದಾರೆ. ಆದರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಜನಗಳೇ ಕಾಣಿಸುತ್ತಿಲ್ಲವಾಗಿದೆ.
ಕೆಲ ಸ್ಟ್ಯಾಂಡ್ ಗಳು ಸಂಪೂರ್ಣ ಖಾಲಿ ಇರುವ ಫೋಟೋಗಳನ್ನು ಪಾಕಿಸ್ತಾನದ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಹಲವು ಫೋಟೋಗಳಲ್ಲಿ ಪ್ರೇಕ್ಷಕರ ಗ್ಯಾಲರಿಗಳು ಖಾಲಿ ಇದೆ. ‘ಪಾಕಿಸ್ತಾನ ಮತ್ತು ಭಾರತದ ಪಂದ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಈ ರೀತಿ ಪ್ರತಿಕ್ರಿಯೆಯನ್ನು ಹಿಂದೆಂದೂ ನೋಡಿರಲಿಲ್ಲ’ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪಂದ್ಯದ ವೇಳೆ ಮಳೆ ಬೇರೆ ಬರುತ್ತಿದೆ. ಮಳೆಯ ನಡುವೆ ಪಂದ್ಯ ಕೂಡ ಕೆಲವೊಮ್ಮೆ ಅನುಮಾನವಾಗಿದೆ. ಹೀಗಾಗಿ ಪ್ರೇಕ್ಷಕರು ಕಡಿಮೆ ಆಗಿರಬಹುದಾ ಎಂದು ಕೂಡ ಹಲವರು ವ್ಯಾಖ್ಯಾನಿಸಿದ್ದಾರೆ. ಆದರೆ ಇಂಥ ಹೈವೋಲ್ಟೇಜ್ ಪಂದ್ಯದಲ್ಲಿ ವೀಕ್ಷಕರೇ ಇಲ್ಲದೆ ಇರುವುದು ಇತಿಹಾಸದಲ್ಲಿ ಮೊದಲು ಎಂದು ಎಲ್ಲರೂ ಹೇಳುತ್ತಿದ್ದಾರೆ.
ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2023 ಲೈವ್ ಸ್ಕೋರ್ : ಭಾರೀ ಮಳೆಯಿಂದಾಗಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾರ್ಕ್ಯೂ ಏಷ್ಯಾ ಕಪ್ ಹಣಾಹಣಿಯಲ್ಲಿ ಆಟವನ್ನು ನಿಲ್ಲಿಸಲಾಗಿದೆ. ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಳೆ ಸುರಿದಾಗ ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿತ್ತು.
ಆರಂಭಿಕರಾದ ರೋಹಿತ್ ಶರ್ಮಾ (56) ಮತ್ತು ಶುಭಮನ್ ಗಿಲ್ (58) ಅರ್ಧಶತಕಗಳ ನೆರವಿನಿಂದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕ್ರಮವಾಗಿ 8 ಮತ್ತು 17 ರನ್ ಗಳಿಸಿದರು.