Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಟಕಗಳ ಮೂಲಕ ಉತ್ತಮ ಮೌಲ್ಯಗಳನ್ನು ಬಿತ್ತುವ ಅವಕಾಶವಿದೆ : ಎಸ್.ಕೆ.ಮಲ್ಲಿಕಾರ್ಜುನ್

Facebook
Twitter
Telegram
WhatsApp

ಚಿತ್ರದುರ್ಗ, (ನ.21) :  ನಗರ ಪ್ರದೇಶಗಳಲ್ಲಿನ ಜನ ಟಿವಿ ಹಾಗೂ ಮೊಬೈಲ್‍ಗೆ ಅಂಟಿಕೊಂಡು ನಾಟಕಗಳನ್ನು ನೋಡುವ ಆಸಕ್ತಿ ಕಡಿಮೆಯಾಗಿದೆ ಹಾಗಾಗಿ  ರಂಗಕರ್ಮಿಗಳು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ನಾಟಕಗಳನ್ನು ನಗರ ಪ್ರದೇಶದ ಜನಗಳಿಗೆ ತಲುಪಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಭಾನುವಾರ ಬಾದರದಿನ್ನಿ ಆಟ್ರ್ಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ಒಂದು ವಾರಗಳ ಉಚಿತ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ಕಾಲದಲ್ಲಿ ನಾಟಕಗಳ ಪ್ರದರ್ಶನವಾದರೆ ಹೆಚ್ಚು ಜನ ಸೇರುತ್ತಿದ್ದರು. ಇಂದು ಜನಗಳನ್ನು ಮನೆಯಿಂದ ರಂಗಮಂದಿರದ ಕಡೆ ಕರೆದುಕೊಂಡು ಬರುವ ಕೆಲಸ ಸವಾಲಿನದ್ದಾಗಿದೆ. ಇಂತಹ ಕಷ್ಟದ ವಾತಾವರಣದಲ್ಲಿಯೂ ರಂಗಭೂಮಿಗೆ ಹೊಸ ನಟರು, ನಿರ್ದೇಶಕರು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ನಾಟಕಗಳ ಮೂಲಕ ಉತ್ತಮ ಮೌಲ್ಯಗಳನ್ನು ಬಿತ್ತುವ ಅವಕಾಶವಿದೆ. ರಂಗಭೂಮಿ ಒಂದು ಪ್ರಬಲ ಮಾಧ್ಯಮವಾಗಿದೆ. ಅನೇಕ ಮಹನೀಯರು ನಾಟಕಗಳನ್ನು ನೋಡಿ ಅದರ ಕಥಾವಸ್ತುವಿನಿಂದ ಪ್ರಭಾವಿತರಾಗಿ ಬದಲಾದ ಉದಾಹರಣೆಗಳಿವೆ. ಬಾದರದಿನ್ನಿ ಆಟ್ರ್ಸ ಅಕಾಡೆಮಿ ಮಕ್ಕಳಿಗೆ ಒಂದು ವಾರಗಳ ಕಾಲ ಉಚಿತ ರಂಗತರಬೇತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ನಿನಾಸಂ ಪದವೀಧರ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ, ಮನಸನ್ನು ಅರಳಿಸುವ ಕಲೆ ರಂಗಭೂಮಿಗಿದೆ. ಪಠ್ಯಾದಾರಿತ ವಿಷಯಗಳನ್ನು ರಂಗಭೂಮಿಯ ಮೂಲಕ ಅನಾವರಣಗೊಳಿಸಿದರೆ ಮಕ್ಕಳಿಗೆ ಉತ್ತಮವಾಗಿ ಮನದಟ್ಟಾಗುತ್ತದೆ. ರಂಗಭೂಮಿಯ ನಾನಾ ಆಯಾಮನಗಳನ್ನು ಮಕ್ಕಳು ಇಂತಹ ರಂಗತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತಮ್ಮದಾಗಿಸಿಕೊಳ್ಳಬೇಕು. ಮಕ್ಕಳಿಗೆ ರಂಗಭೂಮಿ ಮಾಧ್ಯಮವು ಹೆಚ್ಚು ಶಿಸ್ತು, ಸಾಹಿತ್ಯದ ಕಡೆ ಒಲವು ಹಾಗೂ ವಾಕ್‍ಚಾತುರ್ಯ ಬೆಳಸುತ್ತದೆ ಎಂದರು.

ಬಾದರದಿನ್ನಿ ಆಟ್ರ್ಸ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮಾತನಾಡಿ, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನೇಕ ಜನಗಳಿಗೆ ರಂಗಭೂಮಿಯಲ್ಲಿ ತೋಡಗಿಸಿಕೊಳ್ಳುವ ಆಸಕ್ತಿ ಇದೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಅಂತಹ ಆಸಕ್ತರಿಗೆ ಬಾದರದಿನ್ನಿ ಆಟ್ರ್ಸ ಅಕಾಡೆಮಿ ಒಂದು ವೇದಿಕ್ಕೆಯಾಗಿ ನಿಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಪರಿಸರದ ಕುರಿತು ರೂಪಕ ಪ್ರದರ್ಶನ ನೀಡಿದರು.
ಶಿಬಿರದ ನಿರ್ದೇಶಕ ಹಾಗೂ ರಂಗಕರ್ಮಿ ಮಹಾಂತೇಶ್ ಆದಿಮ್, ಹಿರಿಯ ಕಲಾವಿದ ಹರೀಶ್, ಸಂಗೀತಗಾರ ಹೇಮಂತ್, ಕಲಾವಿದೆ ಪದ್ಮಾ, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ, ಜ್ಯೋತಿ ಬಾದರದಿನ್ನಿ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!