ಬೆಂಗಳೂರು: ಮೇಘಾ ಸ್ಪೋಟದಿಂದ ಅಮರನಾಥ್ ಯಾತ್ರೆಯ 15 ಯಾತ್ರಿಗಳು ಸಾವನ್ನಪಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಪ್ರವಾಸಕ್ಕೆ ತೆರಳ್ತಾರೆ. ಪ್ರಾರ್ಥಮಿಕ ಮಾಹಿತಿ ಪ್ರಕಾರ 100 ಜನ ಇದ್ದಾರೆ. ಎಲ್ಲರೂ ಸೇಫ್ ಇದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೇರೆ ಯಾವುದೇ ಅಹಿತಕರ ಘಟನೆಗಳನ್ನ ಸುದ್ದಿ ಇಲ್ಲ. ಸ್ಥಳೀಯ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಹೆಲ್ಪ್ ಲೈನ್ ತೆರೆದಿದ್ದೇವೆ, ಹೆಲ್ಪ್ ಲೈನ್ ಗೆ 15 ರಿಂದ 20 ಜನ ಕಾಲ್ ಮಾಡಿದ್ದಾರೆ. ರೆಸ್ಕ್ಯೂ ಅಪರೇಷನ್ ಏನ್ ಇದೆ ಅದನ್ನ ಮಾಡ್ತೀವಿ. ಕೇಂದ್ರ ಸರ್ಕಾರ ಹಾಗೂ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸ್ಥಳದಲ್ಲಿದ್ದಾರೆ. ನಮ್ಮ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಸಮಸ್ಯೆ ಇದ್ರೆ ಹೆಲ್ಪ್ ಲೈನ್ ಗೆ ಕರೆಮಾಡಬಹುದು, ಅವರನ್ನ ಕೂಡಲೇ ರೆಸ್ಕ್ಯೂ ಮಾಡುವ ಕೆಲಸ ಮಾಡ್ತೀವಿ ಎಂದಿದ್ದಾರೆ.
ಇನ್ನು ರಾಜ್ಯದ ಹಲವೆಡೆ ಮಳೆ ಅನಾಹುತ ವಿಚಾರವಾಗಿ ಸಿಎಂ ಹೇಳಿಕೆ ನೀಡಿದ್ದು, ಮಳೆ ಹಾನಿ ಬಗ್ಗೆ ನಿನ್ನೆ ಸಭೆ ನಡೆಸಿದ್ದೇನೆ. ಕೆಲವು ಕಡೆ ಸ್ವಲ್ಪ ಮಳೆ ಕಮ್ಮಿ ಆಗಿದೆ. ಕೆಲವೆಡೆ ಇನ್ನೂ ಎರಡ್ಮೂರು ದಿನ ಮಳೆ ಆಗುವ ಸಾಧ್ಯತೆ ಇದೆ. ಇದರ ಅನುಗುಣವಾಗಿ ಕಾರ್ಯಾಚರಣೆ ಮಾಡ್ತೇವೆ ಎಂದಿದ್ದಾರೆ.