ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಏ. 21: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತೀಯ ಗಲಭೆಗಳು, ಕೊಲೆಗಳು ಹೆಚ್ಚಾಗುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ನೇಹ ಫಟನೆಯನ್ನು ಲವ್ ಜಿಹಾದ್ ಅಥವಾ ಒತ್ತಾಯದ ಪ್ರೇಮ ಎನ್ನಬೇಕೂ ತಿಳಿಯದಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸರ್ಕಾರ ಇಲ್ಲವಾಗಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎಸ್. ಸಂಪತ್ ಕುಮಾರ್ ತಿಳಿಸಿದರು.
ನೇಹ ಹತ್ಯೆ ಪ್ರಕರಣ ಖಂಡಿಸಿ ಬೆಂಗಳೂರುನಿಂದ ಹುಬ್ಬಳ್ಳಿ ಚಲೋ ಬೈಕ್ ರ್ಯಾಲಿ ಹೂರಟ್ಟಿದ್ದು ದಾರಿ ಮಧ್ಯದಲ್ಲಿ ಚಿತ್ರದುರ್ಗದ ಡಿ ಸಿ ಸರ್ಕಲ್‍ನಲ್ಲಿ ಪ್ರಕರಣ ಕುರಿತು ಮತನಾಡಿದ ಅವರು, ರಾಜ್ಯದಲ್ಲಿ ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಪಕ್ಷ ಒಂದು ಗುಂಪಿನವರಿಗೆ ಓಲೈಕೆಯನ್ನು ಮಾಡುವುದರಿಂದ ಈ ರೀತಿಯಾದ ಘಟನೆಗಳು ಹೆಚ್ಚಾಗುತ್ತಿವೆ. ವಿಶಿಷ್ಟವಾಗಿ ಒಂದು ಕೋಮಿನವರನ್ನು ಗುರಿಯಾಗಿಟ್ಟುಕೊಂಡು ಈ ರೀತಿಯಾದ ಕೆಲಸಗಳನ್ನು ಮಾಡಲಾಗುತ್ತಿದೆ.
ರಾಜ್ಯದಲ್ಲಿ ಕಾನೂನಿನ ಭಯ ಇಲ್ಲದ ರೀತಿಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡು ಅಪರಾಧಗಳನ್ನು ಮಾಡುತ್ತಿದ್ದಾರೆ. ಎಲ್ಲಿ ಅಂದರೆ ಅಲ್ಲಿ ಗಲಾಟೆಗಳು ನಡೆಯುತ್ತಿವೆ. ನಮ್ಮ ಪಾಲಿನ ಕರ್ತವ್ಯಗಳನ್ನು ಪಾಲಿಸಲು ಆಗುತ್ತಿಲ್ಲ, ದೇವರನ್ನು ಪೂಜೆ ಮಾಡುವಾಗಲು ಸಹ ಆಭಯದ ವಾತಾವರಣ ಉಂಟಾಗಿದೆ. ದೇವರ ನಾಮ ಶೋಕ್ಲವನ್ನು ಹೇಳಬೇಕಾದರೂ ಸಹಾ ನಮಗೆ ಇಲ್ಲಿ ಸ್ವಾತಂತ್ರಯ ಇಲ್ಲವಾಗಿದೆ. ಇದಕ್ಕೆ ಬೇರೆಯವರು ಅಡ್ಡಿಯನ್ನು ಉಂಟು ಮಾಡುತ್ತಿದ್ದಾರೆ.
ಅದರಲ್ಲೂ ಸಹಾ ಮಹಿಳೆಯವರ ಮೇಲೆ ಸಾಕಷ್ಟು ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆ. ಇದನ್ನು ಖಂಡಿಸಿ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಸಹಾ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದೇಯೇ ಅಥವಾ ಸರ್ಕಾರ ನಿದ್ರೆ ಮಾಡುತ್ತಿದ್ದೇಯೇ ಗೋತ್ತಾಗುತ್ತಿಲ್ಲ, ಅಥವಾ ಗ್ಯಾರೆಂಟಿಗಳೆ ನಮ್ಮನ್ನು ಕಾಪಾಡುತ್ತವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೇಯೇ ಎಂಬುದು ಗೋತ್ತಾಗುತ್ತಿಲ್ಲ, ಇಂದಿನ ದಿನದಲ್ಲಿ ಮನೆಯಲ್ಲಿ ಮಹಿಳೆಯರು ಮಾತನಾಡುತ್ತಿದ್ದು ಸರ್ಕಾರ ನೀಡುವ ಗ್ಯಾರೆಂಟಿಗಿಂತ ನಮೆಗ ನಮ್ಮ ಬದುಕು ಮುಖ್ಯ, ನಮ್ಮ ಜೀವನ ಮುಖ್ಯ ಎನ್ನುತ್ತಿದ್ದಾರೆ, ಸರ್ಕಾರಕ್ಕೆ ಇದರ ಬಗ್ಗೆ ಅರಿವು ಇಲ್ಲದಾಗಿದೆ ಅದು ಗ್ಯಾರೆಂಟಿಗಳನ್ನು ನಂಬಿ ಕೊತ್ತಿದೆ. ಇದೇ ರೀತಿ ಏಣಾದರೂ ಅನಾಹುತಗಳು ನಡೆದರೆ ಜನ ದಂಗೆಯನ್ನು ಏಳುತ್ತಾರೆ ಈಗಲೇ ಸರ್ಕಾರ ಎಚ್ಚೆತ್ತು ಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದೆ ಇದಕ್ಕೆ ತಕ್ಕ ಪಾಠವನ್ನು ಜನರೆ ಕಲಿಸುತ್ತಾರೆ ಎಂದರು.
ರಾಜ್ಯದಲ್ಲಿ ಮುಂದೆ ಈ ರೀತಿಯಾದ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಇದರ ವಿರುದ್ದ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕಿದೆ. ಇದರ ಬಗ್ಗೆ ಗೃಹ ಮಂತ್ರಿಗಳು ನೇಹಾ ಪ್ರಕರಣದ ಬಗ್ಗೆ ನಿರ್ಲಕ್ಷದ ಮಾತುಗಳನ್ನು ಆಡಿದ್ದಾರೆ ಇದು ಪ್ರೇಮ ಪ್ರಸಂಗ ಎಂದಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯನ್ನು ನಡೆಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡಿಸಬೇಕಿದೆ ಎಂದು ಸಂಪತ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನ ಡ್ರೈವರ್ ರೈಡರ್ ಕ್ಲಬ್‍ನ ರಾಘವೇಂದ್ರ ಮಾತನಾಡಿದರು. ಜಿಲ್ಲಾ ಮಾದ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ವಕ್ತಾರ ನಾಗರಾಜ್ ಬೇಂದ್ರೆ ಗ್ರಾಮಾಂತರ ಮಂಡಲ ಪ್ರದಾನ ಕಾರ್ಯದರ್ಶಿ ವಸಂತ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತಿ ಇದ್ದರು.