Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇದೊಂದು ಬಾರಿ ಕುಮಾರಸ್ವಾಮಿಯನ್ನು ಆಶೀರ್ವದಿಸೋಣಾ ಎಂಬ ಚರ್ಚೆಗಳು ನಡೆಯುತ್ತಿವೆ : ಹೆಚ್ಡಿಕೆ

Facebook
Twitter
Telegram
WhatsApp

ರಾಮನಗರ: ಜನತಾ ಜಲಧಾರೆಯ ಸಮಾರೋಪ ಸಮಾರಂಭ ಇಂದುನಡೆಯಲಿದೆ. ಈ ಹಿನ್ನೆಲೆ ಹೆಚ್ ಡಿ ಕುಮಾರಸ್ವಾಮಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ನವರ ಟ್ವೀಟಾಸ್ತ್ರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ನವರದ್ದು ನಿನ್ನೆಯಿಂದ ತೋರಿಸುತ್ತಾ ಇದ್ದೀರಿ. ಅಷ್ಟು ದೊಡ್ಡಮಟ್ಟದ ಸಮಸ್ಯೆ ನಮ್ಮ ಪಕ್ಷದಲ್ಲಿಲ್ಲ. ಬಗೆಹರಿಸಿಕೊಳ್ಳದೆ ಇರುವಂಥ ಸಮಸ್ಯೆಗಳೇನು ಇಲ್ಲ. ಆದಷ್ಟು ಬೇಗ ಬಗೆಹರಿಸಿಕೊಳ್ಳುತ್ತೇವೆ. ಆ ಗಲಾಟೆಯಲ್ಲ ಅವರ ಪಕ್ಷಕ್ಕೆ ಸಂಬಂಧಿಸಿದ್ದು, ನಾನ್ಯಾಕೆ ಆ ಬಗ್ಗೆ ತಲೆಕೆಡಿಸಿಕೊಳ್ಳಲಿ.

ಕನಿಷ್ಟ 4-5 ಲಕ್ಷ ಜನ ಆ ಸಭೆಯಲ್ಲಿ ಭಾಗವಹಿಸುತ್ತಾ ಇದ್ದಾರೆ. ಎಲ್ಲಾ ರೀತಿಯ ಸುಸಜ್ಜಿತ ವ್ಯವಸ್ಥೆಗಳು ನಡೆದಿದೆ. ವೇದಿಕೆ ಕೂಡ ಸರಿಯಾದ ರೀತಿಯಲ್ಲಿ ಮಾಡಲಾಗಿದೆ. ಎಲ್ಲಾ ಕಡೆ ಜಗಜ್ಜಾಹೀರಾಗಿದೆ. ಎಲ್ಲಿ ಜನತಾ ಜಲಧಾರೆಯ ಕಳಸ ಇರುವ ವಾಹನಗಳು ಪ್ರವಾಸ ಹೊರಟವು ಆ ಪ್ರದೇಶದಲ್ಲಿ ಸಂಪೂರ್ಣವಾಗಿ ಮಳೆಯಾಗಿದೆ. ಎಲ್ಲರಿಗೂ ಅದೇ ಆಶ್ಚರ್ಯ. ಇವತ್ತು ಜೆಡಿಎಸ್ ನ ಜನತಾ ಜಲಧಾರೆಯ ಕಳಸಾ ವಾಹನಗಳು ಬಂದಂತ ಭಾಗದಲ್ಲಿ, ಕಾರ್ಯಕ್ರಮ ಏರ್ಪಾಡು ಮಾಡಿದ ಬಳಿಕ ಧಾರಾಕಾರವಾಗಿ ಮಳೆ ಬಂದಿದೆ. ಇದು ಒಂದು ರೀತಿಯ ಕಾಕತಾಳೀಯ. ಆದರೆ ಇದು ಹೋರಾಟದ ಹುಮ್ನಸ್ಸು ನೀಡಿದೆ‌.

ಇಲ್ಲಿ ಜನಗಳ ವಿಶ್ವಾಸಗಳಿಸುವುದಕ್ಕೆ ಜನತಾ ಜಲಧಾರೆ ಹೋಗಿದ್ದು. ಜನಗಳಲ್ಲಿ ತಿಳುವಳಿಕೆ ಬರಬೇಕು. ಯಾವುದೇ ನದಿಯ ನೀರನ್ನು ಬಳಸಿಕೊಳ್ಳುವಲ್ಲಜ ನಮ್ಮ ವಿಫಲತೆ ಏನಾಗಿದೆ ಅದನ್ನು ಸರಿಪಡಿಸುವ ಕೆಲಸವಾಗಿದೆ. ಜನತಾ ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಇದೊಂದು ಉತ್ತಮವಾದ ಕಾರ್ಯ, ಈ ಒಂದು ಬಾರಿ ಕುಮಾರಸ್ವಾಮಿ ಅವರನ್ನು ಆಶೀರ್ವದಿಸೋಣಾ ಎಂಬ ಚರ್ಚೆಗಳು ಶುರುವಾಗಿವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರು ಕ್ಷೇತ್ರಗಳ ಸೋಲು ವಿಜಯೇಂದ್ರರ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತರುತ್ತಾ..?

  ರಾಜ್ಯದಲ್ಲಿ ಹೈವೋಲ್ಟೇಜ್ ಸೃಷ್ಟಿಸಿದ್ದಂತ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಬಂದಿದೆ. ಮೂರರಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಶಿಗ್ಗಾಂವಿ ಹಾಗೂ ಸಂಡೂರು ಎರಡು ಕೂಡ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆ

ಉಚಿತ ಆಧಾರ್ ಅಪ್ ಡೇಟ್ ಗೆ ಡೆಡ್ ಲೈನ್ ಯಾವಾಗ ಗೊತ್ತಾ..?

    ಸುದ್ದಿಒನ್ | ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಇತರ ವಿವರಗಳು ಬಹಳ ಮುಖ್ಯ. ಬಹಳಷ್ಟು ಜನರ ಆಧಾರ್ ಕಾರ್ಡ್‌ನಲ್ಲಿ ಹೆಸರು ಅಥವಾ ವಿಳಾಸ ತಪ್ಪಾಗಿ ಮುದ್ರಿಸಲಾಗಿರುತ್ತದೆ. ಆಧಾರ್‌ನಲ್ಲಿ ಈ ವಿವರಗಳು ಸರಿಯಾಗಿದ್ದರೆ

ಕಾಂತಾರ-1 ಶೂಟಿಂಗ್ ಮುಗಿಸಿ ಬರುವಾಗ ಅಪಘಾತ : ಹಲವರಿಗೆ ಗಂಭೀರ ಗಾಯ..!

    ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ವರ್ಲ್ಡ್ ವೈಡ್ ಹೆಸರು ಮಾಡಿತ್ತು. ಆ ಸಕ್ಸಸ್ ನಡುವೆಯೇ ಪ್ರೀಕ್ವೇಲ್ ಘೋಷಣೆ ಮಾಡಿದ್ದರು. 2025ಕ್ಕೆ ಅನೌನ್ಸ್ ಎಂಬುದನ್ನು ಹೊಂಬಾಳೆ ಈಗಾಗಲೇ ಘೋಷಣೆ ಮಾಡಿದೆ.

error: Content is protected !!