ವಿಜಯಪುರ: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಮಿತಿ ಮೀರಿದೆ. ರಾತ್ರಿ ಸಮಯದಲ್ಲಿ ಹಿಂಸಾಚಾರದ ಕೃತ್ಯ ನಡೆಸಿದ್ದಾರೆ. ಇದೀಗ ಈ ಘಟನೆಗೆ ಶಾಸಕ ವಸನಗೌಡ ಯತ್ನಾಳ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಸೇನೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ಸರ್ಕಾರದ ಸಲುವಾಗಿ ಶಿವಸೇನೆ ಈ ರೀತಿ ಮಾಡ್ತಾ ಇದೆ. ಅದು ಭಾಷಾ ವೈಷಮ್ಯಕ್ಕೆ ಬಿದ್ದಿದ್ದು ದುರ್ದೈವ. ಇವೆಲ್ಲ ದೇಶ ವಿರೋಧಿ ಚಟುವಟಿಕೆಗಳು. ಇದೆಲ್ಲದರ ಹಿಂದೆ ದೊಡ್ಡ ಗುಂಪಿದೆ. ಯಾರೇ ಆ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.
ಇನ್ನು ಸಂಗೊಳ್ಳಿ ರಾಯಣ್ಣ, ಶಿವಾಜಿ ಮೂರ್ತಿ, ಅಂಬೇಡ್ಕರ್ ಪ್ರತಿಮೆ ಸೇರಿದಂತೆ ದೊಡ್ಡ ದೊಡ್ಡವರ ಪ್ರತಿಮೆಗಳಿಗೆ ಅಪಮಾನ ಮಾಡಲಾಗುತ್ತಿದೆ. ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟವರ ಮೇಲೂ ಕ್ರಮ ಜರುಗಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಯಾವುದೆರ ಮೂರ್ತಿಯ ಮೇಲೆ ಅಪಮಾನವಾದರೂ ಕ್ರಮ ತೆಗೆದುಕೊಳ್ಳಬೇಕು. ರಾಷ್ಟ್ರ ಪುರುಷರ ಮೂರ್ತಿಗೆ ಅಪಮಾನ ಮಾಡುವವರನ್ನು ಎಂದಿಗೂ ಕ್ಷಮಿಸಬಾರದು ಎಂದಿದ್ದಾರೆ.