Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೈತರ ಪಂಪ್ ಸೆಟ್ ಗಳ ಕಳ್ಳತನ : ಸಿರಿಗೇರಿ ಪೊಲೀಸರಿಂದ ಆರೋಪಿಗಳ ಬಂಧನ

Facebook
Twitter
Telegram
WhatsApp

 

ಕುರುಗೋಡು. ಆ.19

ರೈತರು ತಮ್ಮ ಜಮೀನು ಗಳಿಗೆ ನೀರಾವರಿ ಕಲ್ಪಿಸಿಕೊಳ್ಳಲು ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅಳವಡಿಸಿದ್ದ 5 ಎಚ್. ಪಿ
ಪಂಪ್ ಸೆಟ್ ಮೋಟರ್ ಗಳನ್ನು ಇಬ್ಬರು ಕಳ್ಳರು ಕಳ್ಳತನ ಮಾಡಿದ್ದು, ಆರೋಪಿಗಳನ್ನು ಸಿರಿಗೇರಿ ಪೊಲೀಸರು ಬಂಧಿಸಿದ್ದಾರೆ.

ಸಿರಿಗೇರಿ ಗ್ರಾಮದ ಜಡೆಪ್ಪ ಎಂಬ ರೈತರು ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ಲೂಬಿ ಕಂಪನಿಯ 5 ಎಚ್. ಪಿ ನೀರೇತ್ತುವ ಮನೋ ಬ್ಲಾಕ್ ಪಂಪ್ ಸೆಟ್ ಕಳುವಾದ ಬಗ್ಗೆ ಸಿರಿಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೂರಿನ ಅನ್ವಯ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್ಪಿ ನಟರಾಜ್, ಡಿವೈಎಸ್ಪಿ ವೆಂಕಟೇಶ್, ತೆಕ್ಕಲಕೋಟೆ ಸಿಪಿಐ ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ಸಿರಿಗೇರಿ ಪಿಎಸ್ ಐ ಸದ್ದಾಂ ಹುಸೇನ್ ಹೆಚ್. ಅವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡವು ಈ ಪ್ರಕರಣವನ್ನು ಭೇದಿಸಿ ಸಿರಿಗೇರಿ ಗ್ರಾಮದ ಕೆ. ಮಾರುತಿ (20). ಕರಿಬಸವ (25) ಈ ಆರೋಪಿಗಳನ್ನು ಬಂಧಿಸಿ ಬಂದಿತರಿಂದ ವಿವಿಧ ಕಂಪನಿಗಳ 5 ಪಂಪ್ ಸೆಟ್ ಗಳ ಮೋಟರನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿರಿಗೇರಿ ಪೊಲೀಸರು ತಿಳಿಸಿದ್ದಾರೆ.

ಈ ತಂಡದಲ್ಲಿ ಸಿರಿಗೇರಿ ಠಾಣೆಯ ಎಎಸ್ ಐ ಹೆಚ್. ಗಂಗಣ್ಣ, ಸಿಬ್ಬಂದಿಯಾದ ಉಮಾಶಂಕರ್, ಶಿವರಾಯಪ್ಪ, ಹುಲಿಕುಂಟೆಪ್ಪ, ಮಂಜುನಾಥ್, ರಮೇಶ್, ಚಂದ್ರಶೇಖರ, ರಾಮಕೃಷ್ಣ, ಪ್ರಭಾಕರ್, ವಿನೋದ್ ಗೌಡ, ರಂಗಣ್ಣ, ದಿವಾಕರ್ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆ : ಚಿತ್ರದುರ್ಗದಲ್ಲಿ ಸ್ವಾಗತ

  ಚಿತ್ರದುರ್ಗ. ಅ.10 :  ಕಿತ್ತೂರು ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಬುಧವಾರ ಚಿತ್ರದುರ್ಗ ನಗರ ತಲುಪಿತು. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪ  ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಯನ್ನು

ನವೋದಯ 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

  ಚಿತ್ರದುರ್ಗ. ಅ.09: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 9 ಮತ್ತು 11ನೇ ತರಗತಿ ಪ್ರವೇಶಾತಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ರಾಶಿಯವರು ಸಂಕಷ್ಟಗಳು ಎದುರಿಸಲಿದ್ದಾರೆ, ಈ ರಾಶಿಯವರು ನೀವು ಇಷ್ಟಪಟ್ಟಿದ್ದು ಪಡದೆ ಪಡೆಯುತ್ತಿರಿ

ಈ ರಾಶಿಯವರು ಸಂಕಷ್ಟಗಳು ಎದುರಿಸಲಿದ್ದಾರೆ, ಈ ರಾಶಿಯವರು ನೀವು ಇಷ್ಟಪಟ್ಟಿದ್ದು ಪಡದೆ ಪಡೆಯುತ್ತಿರಿ, ಗುರುವಾರ- ರಾಶಿ ಭವಿಷ್ಯ ಅಕ್ಟೋಬರ್-10,2024 ಸರಸ್ವತಿ ಪೂಜಾ ಸೂರ್ಯೋದಯ: 06:11, ಸೂರ್ಯಾಸ್ತ : 05:54 ಶಾಲಿವಾಹನ ಶಕೆ -1946 ಸಂವತ್-2080

error: Content is protected !!