Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಕ್ತಿಯಿಂದ ಕೈ ಮುಗಿದ, ಅರ್ಚಕ ಹೋದ ಕೂಡಲೇ ದೇವಿ ಮಾಂಗಲ್ಯವನ್ನೇ ಎಗರಿಸಿದ..!

Facebook
Twitter
Telegram
WhatsApp

 

ಮಂಡ್ಯ: ದೇವರಿಗೆ ಸೇರಿದ ಹಣವಾಗಲೀ, ವಸ್ತುಗಳನ್ನಾಗಲಿ ತೆಗೆದುಕೊಳ್ಳಲು ಎಲ್ಲರೂ ಭಯ ಪಡುತ್ತಾರೆ. ಆದ್ರೆ ಅಲ್ಲೊಬ್ಬ ಖತರ್ನಾಕ್ ಭಕ್ತ ದೇವಿಯ ಮಾಂಗಲ್ಯ ಸರವನ್ನೇ ಎಗರಿಸಿ ಎಸ್ಕೇಪ್ ಆಗಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಎಂದಿ‌ನಂತೆ ದೇವಸ್ಥಾನದಲ್ಲಿ ಪೂಜೆ ನಡೆದಿದೆ. ಆತ ಭಕ್ತನ ಸೋಗಿನಲ್ಲಿ ಬಂದು ದೇವಿಯ ಮುಂದೆ ಕೈ ಮುಗಿದು ಬೇಡುತ್ತಾ ನಿಂತಿದ್ದಾನೆ. ಅರ್ಚಕರು ತೀರ್ಥ, ಮಂಗಳಾರತಿ ಕೊಟ್ಟು ಸ್ವಲ್ಪ ಹೊರಗೆ ಹೋಗಿದ್ದಾರೆ.‌

ಅದೇ ಸಮಯವನ್ನ ಕಾಯುತ್ತಿದ್ದವನಂತೆ ತಾಯಿ ವಿಗ್ರಹವಿದ್ದ ಗರ್ಭ ಗುಡಿಗೆ ನುಗ್ಗಿ ತಾಳಿ ಕದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. 6 ಗ್ರಾಂ ಚಿನ್ನದ ತಾಳಿ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಕಳ್ಳ ದೇವಿಗೆ ಕೈಮುಗಿದು ಬಳಿಕ ಗರ್ಭ ಗುಡಿಗೆ ನುಗ್ಗಿ ಪರಾರಿಯಾಗುತ್ತಿರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಹಿರಿಯ ಪತ್ರಕರ್ತ ಜಿ.ಎಸ್‌.ಉಜ್ಜಿನಪ್ಪನವರಿಗೆ ಪತ್ನಿ ವಿಯೋಗ

ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ಎಸ್‌.ಉಜ್ಜಿನಪ್ಪ ಅವರ ಪತ್ನಿ ಎಸ್‌.ಭೈರಮ್ಮ (66) ಗುರುವಾರ ಅನಾರೋಗ್ಯದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ನಗರದ ಸರಸ್ವತಿಪುರಂ

ದಲಿತ ಎನ್ನಬೇಡಿ…. ಅಧಿವೇಶನದಲ್ಲಿ ಅಶೋಕ್ ಗೆ ಮಹದೇವಪ್ಪ ಸ್ಪಷ್ಟನೆ…!

    ಬೆಂಗಳೂರು: ಇಂದು ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯದ ಹಗರಣದ ಬಗ್ಗೆ ಚರ್ಚೆಯಾಗಿದೆ. ಮೊದಲಿಗೆ ಮಾತನಾಡಿದ ಆರ್ ಅಶೋಕ್, ಅವರು ದಲಿತರು ಎಂದರು ತಕ್ಷಣ ಎಚ್ಚೆತ್ತು, ನೀವೂ ಪದವನ್ನ ಬಳಸಬಾರದು ಅಂತ ಹೇಳಿದ್ದೀರಲ್ಲ ಎಂದು

ಸದನಕ್ಕೆ ಗೈರಾದ ಸಚಿವರು : ಕೋಪದಿಂದ ಹೊರನಡೆದ ವಿಪಕ್ಷ ನಾಯಕರು..!

  ಬೆಂಗಳೂರು: ನಿನ್ನೆಯೆಲ್ಲಾ ಸರ್ಕಾರಿ ರಜೆಯಲ್ಲಿದ್ದ ಸಚಿವರು, ಶಾಸಕರು ಇಂದು ಅಧಿವೇಶನ ಇರುವುದನ್ನೇ ಮರೆತು ಹೋಗಿದ್ದಾರಾ ಅಂತ. ಆಡಳಿತ ಪಕ್ಷದ ನಾಯಕರು ಅಧಿವೇಶನಕ್ಕೆ ಬಾರದೆ ಇದ್ದ ಕಾರಣ ವಿಪಕ್ಷ ನಾಯಕರು ಸದನದಲ್ಲಿ ಸದ್ದು ಗದ್ದಲ

error: Content is protected !!