ಸುದ್ದಿಒನ್, ಚಳ್ಳಕೆರೆ, (ನ.10) : ನಗರದ ಬಳ್ಳಾರಿ ರಸ್ತೆಯ ಎಡಭಾಗದಲ್ಲಿರುವ ಚಳ್ಳಕೆರಮ್ಮ ದೇವಾಲಯದ ಹುಂಡಿ ಹೊಡೆದು ಹುಂಡಿಯಲ್ಲಿದ್ದ ಹಣ ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Video Player
00:00
00:00
ದೇವಾಲಯದ ಕಬ್ಬಿಣದ ಗೇಟ್ ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.

ದೇವಿಯ ಹುಂಡಿಯು ಸುಮಾರು ಆರು ತಿಂಗಳಿಂದ ಎಣಿಕೆ ಮಾಡಿರಲಿಲ್ಲ. ಈ ವಿಷಯ ತಿಳಿದು ಎಲ್ಲವನ್ನೂ ತಿಳಿದವರೇ ಈ ಕೆಲಸ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಸ್ಥಳಕ್ಕೆ ತಹಶೀಲ್ದಾರ್ ಎನ್. ರಘುಮೂರ್ತಿ,
ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

