ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಪೊಲೀಸ್ ಠಾಣೆಮೆಟ್ಟಿಲೇರಿದ್ದು, ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಡೈಮಂಡ್ ವಸ್ತುಗಳು ನಾಪತ್ತರಯಾಗಿದೆ ಎಂದು ದೂರು ನೀಡಿದ್ದಾರೆ. ತೇನಾಂಪೇಟೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಒಡವೆ ಮೌಲ್ಯ ಸುಮಾರು 3.60 ಲಕ್ಷವಾಗಿದೆ.

ಐಶ್ವರ್ಯಾ ಮೂರು ಬಾರಿ ಲಾಕರ್ ಬದಲಾಯಿಸಿದ್ದಾರೆ. 2021ರಲ್ಲಿ ಮಾಜಿ ಪತಿ ಪ್ಲಾಟ್ ನಲ್ಲಿದ್ದ ಲಾಕರ್ ಬದಲಾಯಿಸಿದ್ದರು. ಬಳಿಕ 2021 ಸೆಪ್ಟೆಂಬರ್ ಹಾಗೂ 2022ರಲ್ಲಿ ಲಾಕರ್ ಬದಲಾವಣೆ ಮಾಡಿದ್ದರು. ಸೆಕ್ಷನ್ 381ರಡಿಯಲ್ಲಿ ಈಗ ದೂರು ದಾಖಲಾಗಿದೆ.

ಐಶ್ವರ್ಯಾ ದೂರಿನಲ್ಲಿ ತಿಳಿಸಿರುವಂತೆ 2019 ತಂಗಿ ಸೌಂದರ್ಯ ಮದುವೆಯಾದ ಮೇಲೆ ಒಡವೆಗಳನ್ನು ನಾನು ಧರಿಸಿದ್ದೆ. ಬಳಿಕ ಎಲ್ಲಾ ಒಡವೆಗಳನ್ನು ಲಾಕರ್‌ನಲ್ಲಿ ಇಡಲಾಗಿತ್ತು ಎಂದಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು, ತನಿಕೆ ಶುರು ಮಾಡಿದ್ದಾರೆ.





GIPHY App Key not set. Please check settings