ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಬಾರಿಗೆ ಜೈಲು ಸೇರಿದ್ದಾರೆ. ವಿಜಯಲಕ್ಷ್ಮೀ ಕಷ್ಟಪಟ್ಟು ಗಂಡನನ್ನ ಬಿಡಿಸಿಕೊಂಡು ಬಂದಿದ್ದರು. ಆದ್ರೆ ಮತ್ತೆ ಜೈಲು ಪಾಲಾದ ಪರಿಸ್ಥಿತಿ ಬಂದಿದೆ. ಆದ್ರೆ ಇದರ ನಡುವೆ ವಿಜಯಲಕ್ಷ್ಮೀ ದರ್ಶನ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಸಂಬಂಧ ವಿಜಯಲಕ್ಷ್ಮೀ ದರ್ಶನ್ ಅವರು ದೂರು ನೀಡಿದ್ದಾರೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಲಕ್ಷ್ಮೀ ದರ್ಶನ್ ಅವರು ಇರುವುದು ಅಪಾರ್ಟ್ಮೆಂಟ್ ನಲ್ಲಿ. ಆದ್ರೆ ಆ ಕಳ್ಳ ಯಾರು..? ಅವರ ಮನೆಯನ್ನ ಟಾರ್ಗೆಟ್ ಮಾಡಿದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟುಕೊಂಡಿವೆ. ಅದರಲ್ಲೂ ವಿಜಯಲಕ್ಷ್ಮೀಗೆ ಗಂಡ ಜೈಲಿನಲ್ಲಿರುವ ನೋವೆ ಜಾಸ್ತಿಯಾಗಿದೆ. ಹೀಗಿರುವಾಗ ಈ ರೀತಿಯ ಘಟನೆಗಳು ಸಹಜವಾಗಿಯೇ ನೋವು ತಂದಿರುತ್ತದೆ. ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ವಿಜಯಲಕ್ಷ್ಮೀ ವಾಸವಾಗಿದ್ದು, ಅದೇ ಮನೆಯಿಂದ 3 ಲಕ್ಷ ರೂಪಾಯಿ ಹಣವನ್ನು ಕದ್ದುಕೊಂಡು ಹೋಗಲಾಗಿದೆ. ಈ ಸಂಬಂಧ ಮ್ಯಾನೇಜರ್ ನಾಗರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ವಿಜಯಲಕ್ಷ್ಮೀ ಅವರು ನಾಗರಾಜ್ ಬಳಿ ಸ್ವಲ್ಪ ಹಣವನ್ನು ಬೆಡ್ ರೂಮಿನ ವಾರ್ಡ್ ರೋನಲ್ಲಿ ಇರಿಸುವಂತೆ ಸೂಚನೆ ನೀಡಿದ್ದರಂತೆ. ಆ ಸೂಚನೆ ಮೇರೆಗೆ ಆ ವಾರ್ಡ್ ರೋನಲ್ಲಿಯೇ ನಾಗರಾಜ್ ಮೂರು ಲಕ್ಷ ಹಣವನ್ನು ಇರಿಸಿದ್ದರಂತೆ. ಆ ಬಳಿಕ ಮೈಸೂರಿಗೆ ತೆರಳಿದ್ದರಂತೆ. ಆದ್ರೆ ಸೆಪ್ಟೆಂಬರ್ 8ರಂದು ಬಂದು ನೋಡಿದಾಗ ಹಣ ಇರಲಿಲ್ಲ ಎನ್ನಲಾಗಿದೆ. ಮನೆ ಕೆಲಸದವರನ್ನು ಕೇಳಿದಾಗಲೂ ಯಾರೂ ಮಾಹಿತಿ ನೀಡಿಲ್ಲ. ಹೀಗಾಗಿ ದೂರು ನೀಡಲಾಗಿದೆ. ಸೆಪ್ಟೆಂಬರ್ 4-8ರ ಅವಧಿಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.







