ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

 

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಅರೇಕಾ ಸಂಶೋಧನಾ ಕೇಂದ್ರವು ನಡೆಸಿದ ವಿಶ್ಲೇಷಣೆಯಲ್ಲಿ ತೀರ್ಥಹಳ್ಳಿ ಅಡಿಕೆ ಕರ್ನಾಟಕದಲ್ಲಿ ಬೆಳೆಯುವ ತಳಿಗಳಲ್ಲಿ ಗುಣಮಟ್ಟದ ಅಡಿಕೆಯಾಗಿ ಹೊರಹೊಮ್ಮಿದೆ.

ಇತ್ತಿಚೆಗೆ ಕೇಂದ್ರದ ವಿಜ್ಞಾನಿಗಳು ವಿವಿಧ ಸ್ಥಳಗಳಲ್ಲಿ ಬೆಳೆದ ಅಡಿಕೆ ಪ್ರಭೇಧಗಳನ್ನು 60 ಜನರ ಗುಂಪಿಗೆ ತೋರಿಸಿದ್ದಾರೆ. ಗ್ರಾಹಕರು, ವ್ಯಾಪಾರಿಗಳು, ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಬೆಳೆಗಾರರನ್ನು ಒಳಗೊಂಡ ಗುಂಪು ವಿಶ್ಲೇಷಣೆಯಲ್ಲಿ ಭಾಗವಹಿಸಿತ್ತು. ಪ್ರಶ್ನಾವಳಿಗಳು ಉತ್ತರಿಸುವ ಮೊದಲು ಕಾಯಿಗಳನ್ನು ನೋಡಲು ಹಾಗೂ ತಿಂದು ರುಚಿ ನೋಡುವುದಕ್ಕೆ ಅವಕಾಶ ನೀಡಲಾಗಿತ್ತು. ಅದನ್ನು ನೋಡಿದಾಗ, ಅಡಿಕೆ ಕಡಿಯುವಾಗ ಆಗುವ ಅನುಭವ, ಪರಿಮಳ ಮತ್ತು ಪ್ರತಿ ವೈವಿದ್ಯತೆಯ ಬಗ್ಗೆ ಕೆಲವು ವಿವರಗಳನ್ನು ತೀರ್ಪುಗಾರರ ಬಳಿ ಕೇಳಲಾಗಿದೆ.

ಈ ಸಂಬಂಧ ಕೇಂದ್ರದ ಪ್ರಧಾ‌ ತನಿಖಾಧಿಕಾರಿ ಡಾ. ನಾಗರಾಜ್ ಅಡಿವಪ್ಪರ ಮಾಹಿತಿ ನೀಡಿದ್ದು, ನಾವು ಈ ಗುಂಪಿನಿಂದ ಪಡೆದ ಫಲಿತಾಂಶವೂ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಕೆಲವು ಭಾಗದಲ್ಲಿ ಬೆಳೆಯುವ ಅರೇಕಾದಲ್ಲಿ ತೀರ್ಥಹಳ್ಳಿಯ ತಳಿಯೂ ಉತ್ತಮವಾಗಿದೆ‌ ಎಂದು ಸೂಚಿಸಲಾಗಿದೆ. ತೀರ್ಥಹಳ್ಳಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶವಾಗಿದೆ. ಬಹುಪಾಲು ಬೆಳೆಗಾರರಯ ಎರಡರಿಂದ ಐದು ಎಕರೆ ತೋಟವನ್ನು ಹೊಂದಿದ್ದಾರೆ. ಹವಮಾನ ಪರಿಸ್ಥಿತಿಗಳು ಕೂಡ ಇಲ್ಲಿನ ಉತ್ಪನ್ನಕ್ಕೆ ಕೊಡುಗೆ ನೀಡುತ್ತವೆ ಎಂದು ಇಂಗ್ಲಿಷ್ ವೆಬ್ಸೈಟ್ ಗೆ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *