Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಂಗಭೂಮಿ ಕಲೆಗಿದೆ ಸಾರ್ವಕಾಲಿಕ ಶ್ರೇಷ್ಠತೆ : ಲೇಖಕ ಯೋಗೀಶ್ ಸಹ್ಯಾದ್ರಿ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.09 : ಕರ್ನಾಟಕ ಸಂಭ್ರಮ-50ರ ಅಂಗವಾಗಿ ಶಿಕ್ಷಣದಲ್ಲಿ ರಂಗಕಲೆ, ರಂಗಸಂವಾದ ಮಾತನಾಡುವ ಗೊಂಬೆ ಕಾರ್ಯಕ್ರಮವನ್ನು ಶ್ರೀಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕಸಂಸ್ಥೆ(ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ  ನಗರದ ಶ್ರೀವಾಸುದೇವರೆಡ್ಡಿ ಸ್ಮಾರಕ ಪ್ರೌಡಶಾಲೆ, ಜೋಗಿಮಟ್ಟಿ ರಸ್ತೆ,ಚಿತ್ರದುರ್ಗ ಇಲ್ಲಿಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಹಾಗೂ  ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್  ಜಿಲ್ಲಾಧ್ಯಕ್ಷರಾದ ಯೋಗಿಶ್ ಸಹ್ಯಾದ್ರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ರಂಗಭೂಮಿಗೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.

ಪ್ರೌಢಶಾಲೆಹಂತದಿಂದ  ಪದವಿಯವರೆಗೆ ಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಮತ್ತು ರಂಗಶಿಕ್ಷಕರು ಮತ್ತು ಸಂಗೀತ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳುವುದರ ಮೂಲಕ ಬಹಳ ಅನುಕೂಲವಾಗುತ್ತದೆ. ಮಾತನಾಡುವ ಗೊಂಬೆ ಕಲೆಯು ಬಹಳ ಅಪರೂಪವಾದ ಕಲೆ ಇದು ಚಿತ್ರದುರ್ಗ ಜಿಲ್ಲೆಯಲ್ಲಿ ರಂಗ ಕಲಾವಿದ ಡಿ.ಶ್ರೀಕುಮಾರ್ ಮಾತ್ರ ಮಾಡುತ್ತಿದ್ದು ಸರ್ಕಾರ ಪ್ರೋತ್ಸಾಹಿಸಬೇಕಾಗಿದೆ ಮಕ್ಕಳಿಗೆ ಹೆಚ್ಚು ಆಕರ್ಷಣೆಯಾಗಿರುತ್ತದೆ ಈ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯಬಹಳ ಶ್ಲಾಘನೀಯ ಬದುಕಲ್ಲಿ ಬಡತನ ಇರಬಹುದು ಆದರೆ ಶಿಕ್ಷಣಕ್ಕೆ ಯಾವುದೇ ರೀತಿಯ ಬಡತನ ಬರುವುದಿಲ್ಲ ಶಿಕ್ಷಣದಿಂದ  ಗುರಿ ಸಾಧಿಸಲು ರಂಗಕಲೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಶ್ರೀಕುಮಾರ್ ತಮ್ಮ ಸಂಸ್ಥೆಯು ರಂಗಭೂಮಿ ಉಳಿಸುವ ನೆಟ್ಟಿದ ಮೇಲೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಪರೀಕ್ಷೆ ಸಮಯದಲ್ಲಿ ಏಕಾಗ್ರತೆ, ಗಮನ ಕೇಂದ್ರೀಕರಣ ಮುಂತಾದ ವಿಷಯಗಳನ್ನು ರಂಗಭೂಮಿಯ ಮೂಲಕ ಮಕ್ಕಳಿಗೆ ತಿಳಿಸಿದಾಗ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ರಂಗಕಲೆಯನ್ನು ಕಾರ್ಯಕ್ರಮದೊಂದಿಗೆ ರಂಗಸಂವಾದ ಹಮ್ಮಿಕೊಂಡಿದ್ದೇವೆ ಮಾತನಾಡುವ ಕಲೆ ಸಹ  ರಂಗಭೂಮಿಯಿಂದ ಕಲಿಯಬಹುದು ಎಂದರು.

ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಜ್ಞಾನದೇವ್ ಉಪನ್ಯಾಸ ನೀಡಿ ಮಾತನಾಡುತ್ತ ಶಿಕ್ಷಣ ಜೀವನವಾದರೆ, ರಂಗ ಕಲೆ ಕೌಶಲ್ಯ,ಜೀವನ ಮತ್ತು ಕೌಶಲ್ಯ ಎರಡನ್ನು ಅಳವಡಿಸಿಕೊಳ್ಳಲು ರಂಗಭೂಮಿ ಪೂರಕವಾಗಿದೆ ಗದಾಯುದ್ಧವನ್ನು ರಂಗ ರೂಪಕ್ಕೆ ತಂದು ಸುಲಲಿತವಾಗಿ ಅಭಿನಯಿಸಿದಾಗ ಸಂಪೂರ್ಣ ಚಿತ್ರಣ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ ಕವಿ ,ಕಾವ್ಯ, ರಚನೆಗಳನ್ನು ಸಂಭಾಷಣೆಯ ಆಧಾರದ ಮೇಲೆ ರಂಗದ ಮೇಲೆ ಪ್ರಯೋಗ ಮಾಡಿದರೆ ಕೃತಿಕಾರರಿಗೆ ಗೌರವಿಸಿದಂತಾಗುತ್ತದೆ.

ನೀರಾವಕಾಶದಲ್ಲಿ ನಕ್ಷತ್ರದಂತೆ ಮಿನುಗುವ ಸಾಹಿತ್ಯವನ್ನು ಅರಗಿಸಿಕೊಳ್ಳುವ ಕೌಶಲ್ಯವು ಮಕ್ಕಳಲ್ಲಿ ಮೂಡುತ್ತದೆ ವಿದ್ಯಾರ್ಥಿಗಳು ಸೃಜನಾತ್ಮಕವಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ರಂಗಭೂಮಿ ಪೂರಕವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ದಯೋಜನೆಗಳು ನಿಜವಾದ ಮಕ್ಕಳಿಗೆ ತಲುಪಲಿ ಎಂಬುದು ಆಶಯವಾಗಿದೆ ಎಂದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಪ್ರಕಾಶ್ ಬಾದರದಿನ್ನಿ ಮಾತನಾಡಿ ಕಲೆ ಕೌಶಲ್ಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತೇವೆ ಸಂಘ ಸಂಸ್ಥೆಗಳ ಕಾರ್ಯಕ್ಕೆ ಮಕ್ಕಳು ಕೈಜೋಡಿಸಿ ಉತ್ತಮ ಜೀವನ ನಿರೂಪಿಸಿಕೊಳ್ಳಿ ಎಂದರು.

ಕಲಾವಿದ ದುರ್ಗೇಶಪ್ಪ ಮಾತನಾಡಿ ಶಿಕ್ಷಣ ಅತಿ ಹೆಚ್ಚು ಅಂಕಕ್ಕೆ ಸೀಮಿತವಾಗಬಾರದು ಸರ್ಕಾರಿ ಕೆಲಸ ಸರ್ಕಾರಿ ಹುದ್ದೆ ಗುರಿಯಾಗಿಟ್ಟುಕೊಂಡು ಓದಬಾರದು ,ಓದು ಜ್ಞಾನಾರ್ಜನೆಗೆ ಸಹಕಾರಿಯಾಗಬೇಕು. ಸ್ವಉದ್ಯೋಗವನ್ನು ಮಾಡುವ ನಿಟ್ಟಿನಲ್ಲಿ ಯಶಸ್ವಿಯಾಗಲು ರಂಗ ತರಬೇತಿ ನಮಗೆ ಸ್ಪೂರ್ತಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕರಾದ ಶ್ರೀಮತಿ ಬಿ.ಎ.ಪದ್ಮಾವಹಿಸಿದ್ದರು. ಶಿಕ್ಷಕರಾದ ಮಹಾಲಿಂಗಪ್ಪ ರಾಷ್ಟ್ರೀಯ ಕ್ರೀಡಾಪಟು ಸಾವಂತ್ ಹಿಮಗಿರಿ ರವಿಕುಮಾರ್, ಶಿವಮೂರ್ತಿ, ಗಿರಿಜಮ್ಮ ,ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪವಿತ್ರ ನೆರವೇರಿಸಿದರು.ಪ್ರಾರ್ಥನೆಯನ್ನು ಕು.ಪ್ರಾರ್ಥನಾ ನೆರವೇರಿಸಿದರು. ಶಾಲೆಯಸಿಬ್ಬಂದಿ ಮಕ್ಕಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!