ಮುನಿರತ್ನಗೆ ಹೊಸ‌ಹೆಸರು ನಾಮಕರಣ‌ ಮಾಡಿದ ಮಹಿಳೆಯರು..?

suddionenews
1 Min Read

ಬೆಂಗಳೂರು: ದಲಿತರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ಶಾಸಕ ಮುನಿರತ್ನ ಅವರನ್ನ ಅರೆಸ್ಟ್ ಮಾಡಲಾಗಿದೆ. ಈಗಾಗಲೇ ಬಿಜೆಪಿಯ ಶಿಸ್ತು ಸಮಿತಿ ಕೂಡ ನೋಟೀಸ್ ನೀಡಿದೆ. ಆ ರೀತಿಯ ಪದ ಬಳಕೆ ಮಾಡಿದ್ದಕ್ಕೆ ವಿವರಣೆ ಕೇಳಿದೆ. ಇದೀಗ ಕಾಂಗ್ರೆಸ್ ನ ಮಹಿಳಾ ನಾಯಕಿಯರು ಇಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮುನಿರತ್ನ ಅವರಿಗೆ ಹೊಸದೊಂದು ಹೆಸರಿಟ್ಟಿದ್ದಾರೆ.


ನಾಮಫಲಕಗಳನ್ನ ಹಿಡಿದು ಇಂದು ಕೆಪಿಸಿಸಿ ಕಚೇರು ಎದುರು ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಆಕ್ರೋಶಗೊಂಡ ಮಹಿಳೆಯರು ’30 ಪರ್ಸೆಂಟ್ ಮನಿ ರತ್ನ’ ಎಂದು ಘೋಷಣೆಗಳನ್ನ ಕೂಗಿದ್ದಾರೆ. ಈ ಮೂಲಕ ಪರ್ಸೆಂಟ್ ಮನಿ ರತ್ನ ಎಂಬ ಹೆಸರನ್ನ ನಾಮಕರಣ ಮಾಡಿದ್ದಾರೆ. ದಲಿತರು ಹಾಗೂ ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ ಮುನಿರತ್ನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

 

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮುನಿರತ್ನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಳು ನಡೆದವು. ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರು, ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುವ ಜೊತೆಗೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ದಲಿತ, ಒಕ್ಕಲಿಗ ಮಹಿಳೆಯರ ಪರವಾಗಿ ಪೋಲಿಸ್ ಕಚೇರಿಗೆ ತೆರಳಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕಾಗಿ ಮನವಿ ಕೂಡ ಸಲ್ಲಿಸಿದರು. ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೌಮ್ಯಾರೆಡ್ಡಿ ಎಐಸಿಸಿಯ ಶಿಲ್ಪಾ ಅರೋರಾ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.

Share This Article
Leave a Comment

Leave a Reply

Your email address will not be published. Required fields are marked *