Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ರಂಭಾಪುರಿ ಜಗದ್ಗುರು ಕಾರಿಗೆ ಚಪ್ಪಲಿ ಎಸೆದ ಮಹಿಳೆ : ಯಾಕೆ ಗೊತ್ತಾ..?

Facebook
Twitter
Telegram
WhatsApp

ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾಮಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ತೆರಳಿದ್ದರು. ಈ ವೇಳೆ ಶ್ರೀ ಕಾರಿನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಈ ಘಟನೆ ನಡೆದ ಬಳಿಕ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಅಲಗಲಿ ಸೃಷ್ಟಿಯಾಗಿದ್ದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

 

ತಾಲೂಕಿನ ಕಲಾದಗಿ ಗ್ರಾಮದಲ್ಲಿ ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಪಂಚಗೃಹ ಗುರುಲಿಂಗೇಶ್ವರ ಮಠವಿದೆ. ಈ ಮಠದ ಪೀಠಾಧಿಪತಿಯ ಆಯ್ಕೆ ಕೋರ್ಟ್ ನಲ್ಲಿದೆ. ಆದರೆ ಮಠದ ಗಂಗಾಧರ ಸ್ವಾಮೀಜಿ ಅವರು ಮಠಕ್ಕೆ‌ ಸಂಬಂಧಿಸಿದ ಕಟ್ಟಡದ ದುರಸ್ತಿ ಕಾರ್ಯ ಹಾಗೂ ಮಠಕ್ಕೆ ಸೇರಿದ ಹೊಲವನ್ನು ಉಳುಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕೆಲವು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ರಂಭಾಪುರಿ ಶ್ರೀಗಳ ಮೇಲೂ ಪ್ರಭಾವ ಬೀರಿದೆ.

 

ಜಗದ್ಗುರುಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮದಲ್ಲಿ ನಡೆಯಲಿರುವ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ರಂಭಾಪುರಿ ಜಗದ್ಗುರುಗಳು ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಪ್ರತಿಭಟನೆ ನಡೆಸುವ ಪ್ರಯತ್ನ ನಡೆಯಿತು. ಈ ವೇಳೆ ಮಹಿಳೆಯೋರ್ವಳು ರಂಭಾಪುರಿ ಜಗದ್ಗುರುಗಳಿದ್ದ ಕಾರಿನತ್ತ ಚಪ್ಪಲಿ ತೂರಿದ್ದಾಳೆ. ಪರಿಣಾಮ ಸ್ಥಳದಲ್ಲಿ ತಳ್ಳಾಟ, ನೂಕಾಟ ಸಂಭವಿಸಿ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೋದಿ ನನ್ನ ಹೃದಯದಲ್ಲಿದ್ದಾರೆ, ಫೋಟೋ ಬಳಕೆಗೆ ಅನುಮತಿ ಸಿಕ್ಕಿದೆ : ಕೆ. ಎಸ್. ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಅಖಾಡದಲ್ಲಿ ನಿಂತಿದ್ದಾರೆ. ಆರಂಭದಿಂದಲೂ ಪ್ರಧಾನಿ ಮೋದಿಯವರ ಫೋಟೋವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ನಾಯಕರು

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

error: Content is protected !!