ತಲ್ವಾರ್ ಹಿಡಿದು ಹುಟ್ಟುಹಬ್ಬ ಆಚರಿಸಿಕೊಂಡ ಭೂಪ : ವೈರಲ್ ಆದ ವಿಡಿಯೋ ಸಾರ್ವಜನಿಕರಿಂದ ವ್ಯಾಪಕ ಖಂಡನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ರಂಗಸ್ವಾಮಿ, ಗುಬ್ಬಿ
ಮೊ : 99019 53364

ಸುದ್ದಿಒನ್, ಗುಬ್ಬಿ, ಅಕ್ಟೋಬರ್. 17 :  ತಲ್ವಾರ್ ಎಂಬ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ತಾಲ್ಲೂಕಿನಾದ್ಯಂತ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಗುಬ್ಬಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಯುವಕರಿಬ್ಬರು ಮಾರ್ಕೆಟ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟು ಹಬ್ಬವನ್ನು ತಲ್ವಾರ್ ಎಂಬ ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದು ಪಟ್ಟಣದ ಜನತೆಯಲ್ಲಿ ಭಯ ಹುಟ್ಟಿಸಿದೆ.

ತುಮಕೂರು ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಸುದ್ದಿ ಕೆಲ ದಿನಗಳಿಂದ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ, ಗುಬ್ಬಿ ಪಟ್ಟಣದಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಯುವಕನೊಬ್ಬ ರೌಡಿಯ ರೀತಿ ತಲ್ವಾರ್ ಹಿಡಿದು ಬಾಸ್ ಎಂಬ ಕೇಕ್ ಕತ್ತರಿಸುವ ದೃಶ್ಯವನ್ನು ವಿಡಿಯೋ ಮಾಡಿ ಆತನ ಸ್ನೇಹಿತರು ತಮ್ಮ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಭಯದ ವಾತಾವರಣ ಸೃಷ್ಟಿಸಿರುವುದು ಮತ್ತೊಂದೆಡೆಯಾಗಿದೆ.

ಗುಬ್ಬಿಯಲ್ಲಿ ಎಂದೂ ಈ ಮಟ್ಟದ ಹುಟ್ಟುಹಬ್ಬ ಆಚರಣೆ ಮಾಡಿದ್ದು ಕಂಡಿಲ್ಲ ಎನ್ನುವ ಅಲ್ಪ ಸಂಖ್ಯಾತರ ಸಮುದಾಯದ ಅವರದ್ದೇ ಜನ ಈ ಆಚರಣೆ ಬಗ್ಗೆ ಖಂಡಿಸುತ್ತಿದ್ದಾರೆ. ಜನುಮ ದಿನದ ಆಚರಣೆ ಎಂದೂ ಮಾಡದ ಸಮುದಾಯದ ಯುವಕರು ಒಗ್ಗೂಡಿ ಬಾಸ್ ಎಂಬ ಅಕ್ಷರದ ಕೇಕ್ ಕತ್ತರಿಸಲು ತಲ್ವಾರ್ ಬಳಸಿದ ಬಗ್ಗೆ ಪೊಲೀಸರು ಜಾಣ ಮೌನ ತಾಳಿದ್ದಾರೆ. ವಿಷಯ ತಿಳಿದು ಯುವಕರ ವಿಚಾರಣೆ ಮಾಡಿ ಪ್ರಭಾವಿಗಳ ಶಿಫಾರಸ್ಸಿಗೆ ಹಾಗೆಯೇ ಮರಳಿ ಕಳುಹಿಸಿದ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿದೆ.

ಮಾರ್ಕೆಟ್ ರಸ್ತೆಯಲ್ಲಿ ಹುಟ್ಟು ಹಬ್ಬ ಆಯೋಜನೆ ಮಾಡಿದ ಯುವಕರು ಬಾಸ್ ಎಂಬ ಕೇಕ್ ತಂದು ಸ್ನೇಹಿತರಾದ ಶಾರುಖ್ ಹಾಗೂ ಮುಗಲ್ ಪಾಷ ಎಂಬ ಇಬ್ಬರು ಯುವ ಮುಖಂಡರ ಜನುಮ ದಿನ ಆಚರಣೆಯನ್ನು ಮಾಡಿದ್ದು ಈ ಪೈಕಿ ಓರ್ವ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಅವರದ್ದೇ ಸಮುದಾಯದ ಹಲವರು ಖಂಡಿಸಿ ಕೋಮು ಪ್ರಚೋದನಕಾರಿ ಕೆಲಸ ಇದು ಎನ್ನುತ್ತಿದ್ದಾರೆ. ಆತಂಕ ಮೂಡಿಸಿದ ಈ ಘಟನೆ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸದಿದ್ದರೆ ಕೋಮು ಗಲಭೆಗಳಿಗೆ ಮೂಲ ಆಗಲಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *