Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯುತ್ ದರ ಹೆಚ್ಚಳ, ಬಿಲ್ ಕಟ್ಟುವುದೇ ಇಲ್ಲ ಎಂದು ಹುಣುಸೇಕಟ್ಟೆ ಗ್ರಾಮಸ್ಥರ ಆಕ್ರೋಶ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಜೂ.11 : ಎಲ್ಲೆಡೆ ವಿದ್ಯುತ್ ದರ ಹೆಚ್ಚಳದ ಬಗ್ಗೆ ಚರ್ಚೆ ಜೋರಾಗಿದೆ. ಈ‌ ವಿಚಾರವಾಗಿ ತಾಲ್ಲೂಕಿನ ಹುಣುಸೇಕಟ್ಟೆ ಗ್ರಾಮದಲ್ಲಿ ಯೂನಿಟ್‍ಗೆ ರೂ.7.00 ದರ ವಿಧಿಸಿದರೆ ವಿದ್ಯುತ್ ಬಿಲ್ಲು ಸಂಪೂರ್ಣವಾಗಿ ಕಟ್ಟುವುದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರುವನೂರು ಹೋಬಳಿ ಬೆ.ವಿ.ಕಂ ಎಸ್.ಓ. ಗಿರೀಶ್‍ರೆಡ್ಡಿ ಹಾಗೂ ಲೈನ್‍ಮ್ಯಾನ್‍ಗಳನ್ನು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಬಂದಾಗ ವಿದ್ಯುತ್ ಬಿಲ್ಲು ಕಟ್ಟುವುದಿಲ್ಲವೆಂದು ತಿಳಿಸಿ, ವಾಪಾಸ್ಸು ಕಳುಹಿಸಿದ ಘಟನೆ ನಡೆದಿದೆ.

ವಿದ್ಯುತ್ ಪ್ರತಿ ಯೂನಿಟ್‍ಗೆ ರೂ.4.05 ಯಿಂದ ರೂ.4.75 ಗೆ ಹೆಚ್ಚಳವಾಗಿದೆ. ಆದರೆ ಈಗಿನ ದರ ಪ್ರತಿ ಯೂನಿಟ್‍ಗೆ ರೂ.7.00 ಆಗಿದ್ದು, (ಸುಮಾರು 2 ರೂ 28 ಪೈ.) ಹೆಚ್ಚಳವಾಗಿರುತ್ತದೆ. ಮೀಟರ್ ಬಾಡಿಗೆ ರೂ.110 ಆಗಿದ್ದು, ಹಳೆಯ ಮೀಟರ್ ಬಾಡಿಗೆ ರೂ.85 ಇತ್ತು, ಇತರೆ ಶುಲ್ಕ ಹಣ ಹಾಕಿರುವುದರನ್ನು ಕಡಿತಗೊಳಿಸಿ, ವಿದ್ಯುತ್ ಬಿಲ್ಲು ಯೂನಿಟ್‍ಗೆ ರೂ.4.05 ರಂತೆ ವಿದ್ಯುತ್ ಶುಲ್ಕವನ್ನು ನಿಗಧಿಪಡಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಗ್ರಾಮೀಣ ಉಪವಿಭಾಗ, ತುರುವವನೂರು ಇವರಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಾಲಯ್ಯ, ಗ್ರಾ.ಪಂ. ಮಾಜಿ ಸದಸ್ಯರು ಗುರುಮೂರ್ತಿ, ಗ್ರಾ.ಪಂ. ಸದಸ್ಯರು ಮಹಂತೇಶ್, ಕೋಲಾರದ ನಾಗರಾಜ್, ಪೂಜಾರಿ ಮಾರುತಿ, ರಂಗೇಗೌಡ ಕೆ.ಎಂ.ಕಾಂತರಾಜ್ ಹಾಗೂ ಇನ್ನು ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

ಶಾಸಕ ಮುನಿರತ್ನ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ : ಎಸ್.ಜಯಣ್ಣ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಗುತ್ತಿಗೆದಾರನನ್ನು ಮನೆಗೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬೆಂಗಳೂರು ರಾಜರಾಜೇಶ್ವರಿ

error: Content is protected !!