ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಯುಧ್ಧ ಭೀತಿಯ ನಡುವೆ ಸರ್ಕಾರ ಕನ್ನಡಿಗರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಆದ್ರೆ ದುರದೃಷ್ಟವಶಾತ್ ನವೀನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಇಂದು ನವೀನ್ ಮೃತದೇಹ ಅವರ ಮನೆಯವರಿಗೆ ತಲುಪಿದೆ. ಈ ಸಂಬಂಧ ಪರಿಷತ್ ನಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಹರಿಪ್ರಸಾದ್, ನವೀನ್ ಕುಟುಂಬಸ್ಥರಿಗೆ 22 ದಿನ ಅರಣ್ಯ ರೋಧನೆಯಾಗಿತ್ತು ಎಂದಿದ್ದಾರೆ.
ಇನ್ನು ಯುದ್ಧದ ವೇಳೆ ಉಕ್ರೇನ್ ಒಳಗೆ ಯಾರು ಹೋಗಲು ಆಗುತ್ತಿರಲಿಲ್ಲ. ವಿದ್ಯಾರ್ಥಿಗಳು ಅವರೇ ರಿಸ್ಕ್ ತೆಗೆದುಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಉಕ್ರೇನ್ ಗೆ ಹೋಗಿದ್ದು ಯಾಕೆ..? ನಮ್ಮ ದೇಶದಲ್ಲಿ ಯಾಕೆ ಕೈಗೆಟಕುವ ಶಿಕ್ಷಣ ಕೊಡಬಾರದು ಎಂದು ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಇನ್ನು ಉಕ್ರೇನ್ ನಿಂದ ವಿದ್ಯಾಭ್ಯಾಸವನ್ನ ಅರ್ಧಕ್ಕೆ ಮೊಟಕುಗೊಳಿಸಿ ಬಂದಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ. ಸರ್ಕಾರ ಇದಕ್ಕೊಂದು ಪರಿಹಾರ ಹುಡಕಬೇಕು ಅನ್ನೋದು ವಿದ್ಯಾರ್ಥಿಗಳ, ಪೋಷಕರ ಮನವಿಯಾಗಿದೆ.