ಬೆಳಗಾವಿ: ಎಂಇಎಸ್ ಪುಂಡರು ತಮ್ಮ ವಿಕೃತಿಯನ್ನ ಪ್ರತಿಮೆಗಳ ಧ್ವಂಸ ಮಾಡುವ ಮೂಲಕ ಮೆರೆದಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನ ರಾತ್ರೋ ರಾತ್ರಿ ಧ್ವಂಸ ಮಾಡಿ ವಿಕೃತಿ ಮೆರೆದಿದ್ದರು. ಅದಕ್ಕೆ ರಾಜ್ಯದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅದೇ ಜಾಗದಲ್ಲಿ ಮತ್ತೆ ರಾಯಣ್ಣ ಪ್ರತಿಮೆ ಮರುಸ್ಥಾಪನೆ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನ ಭಗ್ನಗೊಳಿಸಿದ ಸ್ಥಳದಲ್ಲಿಯೇ ಮೂರ್ತಿಯನ್ನ ಮರುಸ್ಥಾಪನೆ ಮಾಡಲಾಗಿದೆ. ಆರು ಅಡಿ ಎತ್ತರದ ಹೊಸ ಮೂರ್ತಿಯನ್ನ ಆ ಜಾಗದಲ್ಲಿಯೆರ ಕೂರಿಸಲಾಗಿದೆ. ಕನ್ನಡಪರ ಸಂಘಟನೆಗಳು, ಸ್ಥಳೀಯರು ರಾಯಣ್ಣನ ಮೂರ್ತಿಗೆ ಕ್ಷೀರಾಭಿಷೇಕ ಮಾಡಿ, ಪೂಜೆ ಸಲ್ಲಿಸಿದ್ದಾರೆ.
ಘಟನೆ ನಡೆದ ಮೇಲೆ ಈ ಜವಬ್ದಾರಿಯನ್ನ ಪೊಲೀಸರು ವಹಿಸಿಕೊಂಡಿದ್ದರು. ಇದೀಗ ಪೊಲೀಸರು ಕೊಟ್ಟ ಮಾತಿನಂತೆಯೇ ಮೂರ್ತಿ ತಂದುಕೊಟ್ಟಿದ್ದಾರೆ. ಅದಕ್ಕೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಸಲ್ಲಿಸಲಾಗಿದೆ.