ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಚಳ್ಳಕೆರೆ, ಅಕ್ಟೋಬರ್.06 : ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃಧ್ದಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರು.
ಸಮೀಪದ ಬೆಳಗೆರೆ ಗ್ರಾಮದ ಹೊರವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಯುವಕರ ಮನವಿಯಂತೆ ಶಾಲೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಮ್ಮ ಸರ್ಕಾರ ಹಳ್ಳಿಗಾಡಿನ ಶಾಲೆಗಳ ಸಮಗ್ರ ಅಭಿವೃಧ್ದಿಗೆ ಹೆಚ್ಚು ಒತ್ತುನೀಡಿ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೂಡಲೇ ಈ ಶಾಲೆಗೆ ಅಗತ್ಯವಾಗಿ ಬೇಕಾದ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಈ ಭಾಗದ ಶಾಲೆಗಳನ್ನು ವಿಲೀನಗೊಳಿಸಿ ಪಬ್ಲಿಕ್‌ಸ್ಕೂಲ್ ಆರಂಭಿಸಲು ಯೋಜಿಸಲಾಗುವುದು ಎಂದರು .
ಶಾಲಾ ಸಮಿತಿಯ ಅಧ್ಯಕ್ಷ ಶಾಂತಪ್ಪ ಮಾತನಾಡಿ, ಈಗಿರುವ ಕೊಠಡಿಗಳು ಮಕ್ಕಳಿಗೆ ಮಾರ್ಗದರ್ಶನ ನೀಡಲು ಸಾಕಾಗುವುದಿಲ್ಲ. ಕೂಡಲೇ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಹಣಕಾಸಿನ ಮಂಜೂರಾತಿ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ತಿಪ್ಪೇಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ರೂಪಾ, ತಹಸೀಲ್ದಾರ್ ರೆಹಾನ್‌ಪಾಷಾ, ಬಿಇಒ ಕೆ ಎಸ್ ಸುರೇಶ, ಗ್ರಾಪಂ ಸದಸ್ಯರಾದ ರಂಗಸ್ವಾಮಿ, ನಿಜಲಿಂಗಪ್ಪ, ಶಿವಮ್ಮ, ವಿಶಾಲಾಕ್ಷಿ, ಮಂಜುನಾಥ, ವೀರೇಶ, ವೆಂಕಟರಮಣ, ಜಯಣ್ಣ, ರಂಗಸ್ವಾಮಿ, ನಾಗಾರ್ಜುನ್, ಶಿವಣ್ಣ, ಗ್ರಾಮದ ಶಾಲಾ ಮುಖ್ಯಶಿಕ್ಷಕಿ ಸುಜಾತಾ, ಶಾಲಾ ಸಿಬ್ಬಂದಿ ಗ್ರಾಮದ ಯುವಕ ಸಂಘಗಳ ಪದಾಧಿಕಾರಿಗಳು ಶಾಲಾ ಸಮಿತಿಯವರು ಗ್ರಾಮಸ್ಥರು ಇದ್ದರು.
ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಹಕಾರ ಮಾಡುವುದಾಗಿ ಭರವಸೆ ನೀಡಿದ ಶಾಸಕರಿಗೆ ಶಾಲಾ ಅಭಿವೃದ್ಧಿ ಸಮಿತಿ ಗ್ರಾಮಸ್ಥರು ಸನ್ಮಾನಿಸಿದರು.