in

ದೇವರ ಹುಡುಕಾಟದಲ್ಲಿ ಗುರು -ಶಿಷ್ಯರ ಪಾತ್ರ ಮಹತ್ವವಾದದ್ದು : ಕೋಡಿಹಳ್ಳಿ ಶ್ರೀಗಳು

suddione whatsapp group join

ಕುರುಗೋಡು. ಜ.14 : ಪ್ರತಿಯೊಬ್ಬರು ಪ್ರಜಾಪ್ರಭುತ್ವದಲ್ಲಿ ವಿದ್ಯಾ ಪಡಿಯಬೇಕು ಅಂದ್ರೆ ಮೊದಲು ಮಾನವೀಯತೆ ಹೊಂದಿರಬೇಕು ಎಂದು ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠ ಮಹಾ ಸಂಸ್ಥಾನ ಸುಕ್ಷೇತ್ರದ ಪರಮ ಪೂಜ್ಯ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅಭೀಮತ ವ್ಯಕ್ತಪಡಿಸಿದರು.

ಸಮೀಪದ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆಯ ಶ್ರೀ ನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶ್ರೀ ನಂದಿ ಚಿತ್ತಾರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಶ್ರಿವಚನ ನೀಡಿ ಮಾತನಾಡಿದ ಅವರು, ದೇವರ ಹುಡುಕಾಟದಲ್ಲಿ ಹಾದಿ ತಪ್ಪುವ ಆತ್ಮಗಳನ್ನು ಮತ್ತೆ ಸರಿದಾರಿಗೆ ತರುವ ಕೆಲಸ ಗುರು ಶಿಷ್ಯರ ಸಂಬಂಧ ಮಾಡುತ್ತದೆ. ಮೊದಲಲ್ಲಿ ಇದನ್ನು ಅನೇಕ ಆಧ್ಯಾತ್ಮಿಕ ಹಾದಿಗಳು ಮತ್ತು ಗುರುಗಳ ನಡುವೆ ತುಲನೆ ಮಾಡುವುದು ಒಳಿತು ಎಂದರು.
ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ತಿಳಿಸಿದರು.

ಪರ ದೇಶದ ಜನರು ಭಾರತೀಯ ಸಂಸ್ಕೃತಿಯನ್ನು ಮತ್ತು ಜನರನ್ನು ಇವತ್ತಿನ ದಿನಗಳಲ್ಲಿ ಪ್ರೀತಿಸಿ ಆರಾದಿಸುತ್ತಿದ್ದಾರೆ, ಕಾರಣ ಭಾರತೀಯರು ದೇವರನ್ನು ಪ್ರೀತಿಸಿ, ಗೌರವಿಸಿ, ಆರಾದಿಸುವುದರಿಂದ ನಾವು ಭಾರತೀಯರನ್ನು ಹೆಮ್ಮೆಯ ಪ್ರೀತಿಸಿ ಗೌರವಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಭಾರತ ದೇಶಕ್ಕಾಗಿ ಹೋರಾಡಿದ ಮಹನೀಯರ ಚಿಂತನೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಅಂದಾಗ ಮಾತ್ರ ನಿಮ್ಮ ಜೀವನ ಉಜ್ವಲಗೋಲ್ಲುವುದಕ್ಕೆ ಸಾಧ್ಯ ಎಂದರು.

ಬಡತನದಲ್ಲಿ ಹುಟ್ಟಿ ದೇಶಕ್ಕಾಗಿ ಹೋರಾಡಿದ ಕೆಲ ಮಹನೀಯರಂತವರು ಪ್ರತಿಯೊಂದು ಶಾಲೆಯಲ್ಲಿ ಹುಟ್ಟಬೇಕಾದ ಅನಿವಾರ್ಯತೆ ಇವತ್ತಿನ ದಿನಮಾನಗಳಲ್ಲಿ ಇದೆ ಎಂದರು.

ಮನುಷ್ಯನ ಜೀವನದಲ್ಲಿ ಯಾವುದು ಶಾಶ್ವತಲ್ಲ, ಯಾರು ಏನೇ ಸಂಪಾದಿಸಿದರು ಅದು ಉಳಿಯುವುದಿಲ್ಲ, ಜೊತೆಗೆ ತಗೊಂಡು ಹೋಗುವುದಿಲ್ಲ ಶಾಶ್ವತವಾಗಿ ಉಳಿಯುವುದು ಶಿಕ್ಷಣ ಅದು ಮಾನವೀಯ ಮೌಲ್ಯಗಳಿಂದ ಕೂಡಿದ್ರೆ ಮಾತ್ರ ಅದಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಮರಿಸಿದರು.

ಬಹುತೇಕ ಶಾಲೆಗಳಲ್ಲಿ ಮಕ್ಕಳು ವಿದ್ಯಾ ಪಡಿಯುವ ಬಾಲ್ಯದಲ್ಲೇ ಜಾತಿಯ ಸಮಸ್ಯೆಗಳು ಎಲ್ಲಂದರಲ್ಲಿ ತೆಲಾಡುತ್ತಿವೆ ಅದು ಮೊದಲು ನಿವಾರಣೆ ಯಾಗಬೇಕು ಎಂದರು. ಶಿಕ್ಷಕರು ಇದರ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದೇ ಅಲ್ಲ ಅದರ ಜೊತೆಗೆ ಅವರಿಗೆ ಕೃಷಿ ಬಗ್ಗೆ, ದುಡಿಯುವುದರ ಬಗ್ಗೆ, ವ್ಯವಹಾರದ ಬಗ್ಗೆ, ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಯಪಡಿಸಬೇಕಾಗಿದೆ ಎಂದು ತಿಳಿಸಿದರು.

ಉಪಾಧ್ಯಯರು ಮಕ್ಕಳಿಗೆ ಭೋದನೆ ಮಾಡುವಾಗ ಶಿಕ್ಷಣಕ್ಕೆ ಅತ್ತಿರ ಇರಬೇಕು ಅಂದಾಗ ಮಾತ್ರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಾಲಿಕ್ಕೆ ಸಾಧ್ಯ ಎಂದು ತಿಳಿಸಿದರು.

ಇದೆ ವೇಳೆ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ನೃತ್ಯ, ಸಂಸ್ಕೃತಿಕ ಕಾರ್ಯಕ್ರಮಗಳು ನೆರೆವೇರಿದವು. ನೋಡುಗರ ಗಮನ ಸೇಳದವು.

ಈ ಸಂದರ್ಭದಲ್ಲಿ ಕೊಕ್ಕರಚೇಡು ಶ್ರೀ ಶಂಕರನಂದ ಸೇವಾಶ್ರಮದ ಶ್ರೀ ಗುರು ಚಾರನಂದಗಿರಿ ಗುರು ಮತಾಜೀ, ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು, ಶ್ರೀ ನಂದಿ ಸಂಸ್ಥೆಯ ಅಧ್ಯಕ್ಷ ಜೆ. ರವಿರೆಡ್ಡಿ, ಕೆಎಂಎಸ್ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಬಳ್ಳಾರಿ ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಕಾಲೇಜಿನ ಪ್ರಾಚಾರ್ಯ ಮಹೇಂದ್ರ, ಉಪ ಪ್ರಚಾರ್ಯ ಗೋವಿಂದ ರೆಡ್ಡಿ, ಮತ್ತು ಬಾದನಹಟ್ಟಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರ ಇದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಅಂತ ಸಿಪಿ ಯೋಗೀಶ್ವರ್ ಅವರೇ ಭವಿಷ್ಯ ನುಡಿದಿರುವ ಆಡಿಯೋ ವೈರಲ್..!

ರಾಷ್ಟ್ರಪತಿ ದ್ರೌಪದಿ ಮುರ್ಮಾ ಕಾಲುಮುಟ್ಟಿ ನಮಸ್ಕಾರ ಮಾಡಿದ್ದ ಸರ್ಕಾರಿ ನೌಕರ ಅಮಾನತು..!