ಚಿತ್ರದುರ್ಗ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಚಿನ್ಮುಲಾದ್ರಿ ಚಿತ್ರದುರ್ಗ, ನ್ಯಾಷನಲ್ ಹೈವೇ ಪ್ರಾಧಿಕಾರದವರ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಮಲ್ಲಾಪುರದ ಸಮೀಪ ರಿಂಗ್‍ರೋಡ್ ಹೈವೆ ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷರಾದ ರೊ.ಈ.ಅರುಣ್‍ಕುಮಾರ್ ಮಾನವನ ದುರಾಸೆಯಿಂದ ಗಿಡ-ಮರಗಳು ನಾಶವಾಗುತ್ತಿರುವುದರಿಂದ ಸಕಲ ಜೀವರಾಶಿಗಳು ತೊಂದರೆ ಅನುಭವಿಸುವಂತಾಗಿದೆ. ಮನುಷ್ಯನ ಉಸಿರಾಟಕ್ಕೆ ಶುದ್ದವಾದ ಗಾಳಿ ಬೇಕಾಗಿರುವುದರಿಂದ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದರೆ ಮುಂದಿನ ಪೀಳಿಗೆಗೆ ನೀಡುವ ನಿಜವಾದ ಕೊಡುಗೆ ಎಂದು ಹೇಳಿದರು.
ಕೆಲವರು ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡಿಕೊಳ್ಳುವ ಬದಲು ಒಂದೊಂದು ಗಿಡ ನೆಟ್ಟು ಪರಿಸರವನ್ನು ಉಳಿಸಬೇಕಾಗಿದೆ ಎಂದರು.
ರೋಟರಿ ಕ್ಲಬ್ ಚಿನ್ಮುಲಾದ್ರಿ ಚಿತ್ರದುರ್ಗ ಜಂಟಿ ಕಾರ್ಯದರ್ಶಿ ರೊ.ಶಂಕರಪ್ಪ, ರೊ.ವಿಶಾಲಾಕ್ಷಿ, ರೊ.ಶಿಲ್ಪಾದಿವಾಕರ್, ರೊ.ಲಕ್ಷ್ಮಿಕಾಂತ್, ರೊ.ಇಕ್ಬಾಲ್, ರೊ.ಚೇತನ್, ಹಾಸ್ಯ ಸಾಹಿತಿ ಜಗನಾಥ, ಹರೀಶ್, ಇನ್ನರ್‍ವೀಲ್ಹ್ ಕ್ಲಬ್‍ನ ಸದಸ್ಯರುಗಳು, ನ್ಯಾಷನಲ್ ಹೈವೇ ಬೆಂಗಳೂರು ವಿಭಾಗದ ಚಿತ್ರದುರ್ಗ ಶಾಖೆಯ ಮುಖ್ಯಸ್ಥರು ಸಸಿ ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.