ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಗಾಗ ಹಲವಾರು ಟ್ವಿಸ್ಟ್ ಅಂಡ್ ಟರ್ನಿಂಗ್ಸ್ ಗಳು ಕಾಣಿಸುತ್ತಿರುತ್ತವೆ. ಇದೀಗ ರಾಜ್ಯಸಭೆ ಚುನಾವಣೆಯ ವಿಚಾರದಲ್ಲೂ ಆ ಬಗ್ಗೆ ಅಂಥದ್ದೊಂದು ಸಂಗತಿ ಹೊರ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ ನ ಹೆಚ್ ಡಿ ರೇವಣ್ಣ ಮಾತನಾಡಿರುವುದು ಹಲವು ಚರ್ಚೆ ಹುಟ್ಟು ಹಾಕಿದೆ.
ರಾಜ್ಯಸಭೆ ಚುನಾವಣೆ ಸಂಬಂಧ ಮಾತನಾಡಿದ ರೇವಣ್ಣ, ನಮ್ಮ ಬಳಿ 32 ಮತಗಳಿವೆ. ಎರಡು ರಾಷ್ಟ್ರೀಯ ಪಕ್ಷಗಳಿವೆ. ಅದರಲ್ಲಿ ಒಂದು ಕೋಮುವಾದಿ ಪಕ್ಷ. ಇನ್ನೊಂದು ಕೋಮುವಾದ ವಿರೋಧಿಸುವ ಪಕ್ಷ. ಸದ್ಯಕ್ಕೆ ನಾವೂ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ಅದಕ್ಕೆ ಸೋನಿಯಾ ಅವರ ಬೆಂಬಲವನ್ನು ಕೇಳೊದ್ದೇವೆ. ಆದರೆ ನಿನ್ನೆ ದಿಢೀರನೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿರುವುದು ಬೇಸರವಾಗಿದೆ ಎಂದಿದ್ದಾರೆ.
ನಮ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕಾಗಿತ್ತು. ಆದರೆ ನಿನ್ನೆ ಕಾಂಗ್ರೆಸ್ ಸಭೆ ಇದ್ದ ಕಾರಣ ಅದು ಆಗಲಿಲ್ಲ. ದೇವೇಗೌಡ ಅವರು ಶುಕ್ರವಾರವೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ಮತವೇ ಬೇಡ ಎನ್ನುತ್ತಿದ್ದಾರೆ. ಆದರೆ ನಾವೂ ಅವರಿಗೆ ಮನವಿ ಮಾಡುತ್ತೇವೆಂದು ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.