ಹೌದು ಯುಗಾದಿ ಹಬ್ಬಕ್ಕೂ ಮುನ್ನ ಒಂದು ಮಳೆಯಾಗಬೇಕಿದೆ. ಇದು ಅನಾದಿ ಕಾಲದಿಂದಾನೂ ನಡೆದುಕೊಂಡು ಬಂದಿರುವ ಪದ್ಧತಿ. ಪ್ರಕೃತಿಯೇ ಹಾಗೇ ಯಾರೂ ಏನೇ ಬದಲಾದರೂ ತಾನೂ ಮಾತ್ರ ಬದಲಾಗುವುದಿಲ್ಲ. ಆ ಕಾಲ ಕಾಲಕ್ಕೆ ಏನು ಮಾಡಬೇಕೋ ಅದನ್ನೇ ಮಾಡುತ್ತಾ ಹೋಗುತ್ತದೆ. ಇಂದು ಮಳೆ ಕೂಡ. ಹವಮಾನ ಇಲಾಖೆ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂಬ ಸೂಚನೆಯನ್ನು ನೀಡಿತ್ತು. ಇದೀಗ ಸಂಜೆ ವೇಳೆಗೆ ಜೋರು ಮಳೆ ಕಾಣಿಸಿಕೊಂಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರು ಮಳೆಯಾಗಿದೆ. ಮೊದಲೇ ಬೇಸಿಗೆಯ ಬಿಸಿಲು ಜೋರಾಗಿತ್ತು. ಇದರ ನಡುವೆ ವರುಣರಾಯ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿಯ ಹೆಬ್ಬಾಳ, ನಾಗವಾರ ಮುಖ್ಯರಸ್ತೆ, ಆರ್.ಟಿ.ನಗರ, ಸುಲ್ತಾನ್ ಪಾಳ್ಯ, ಮಾನ್ಯತಾ ಟೆಕ್ ಪಾರ್ಕ್, ಮೇಖ್ರಿ ಸರ್ಕಲ್, ಸದಾಶಿವನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.

ಸಿಲಿಕಾನ್ ಸಿಟಿಯ ಇನ್ನು ಕೆಲವೆಡೆ ಅಂದ್ರೆ ಟೌನ್ ಹಾಲ್, ಮಾರ್ಕೆಟ್, ಮೆಜೆಸ್ಟಿಕ್, ಯಲಹಂಕ, ಹೆಣ್ಣೂರು, ಟಿನ್ ಫ್ಯಾಕ್ಟರಿ, ಕಲ್ಯಾಣ ನಗರ, ವಿಧಾನಸೌಧ, ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಜೆಪಿ ನಗರ, ಜಯನಗರ ಭಾಗಗಳಲ್ಲಿ ಕೊಂಚ ಮಳೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ. ಇನ್ನಷ್ಟೇ ಮಳೆ ಬರಬೇಕಿದೆ. ಬೇಸಿಗೆಯ ಬಿಸಿಲಿನಿಂದ ಕಾದಿದ್ದ ಭೂಮಿಗೂ ಮಳೆಯಿಂದ ಹಿತವೆನಿಸಿದೆ. ಫ್ಯಾನ್ ಗಾಳಿಯೂ ಬಿಸಿಯಾಗಿದ್ದ ಈ ಕಾಲಕ್ಕೆ ತಣ್ಣನೆಯ ಬೀಸಿದ ಗಾಳಿಯಿಂದ ಜನ ಕೂಡ ಕೂಲ್ ಆಗಿದ್ದಾರೆ. ನಾಳೆ ಕೂಡ ಮಳೆ ಬರಲಿದೆ ಎಂಬ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ ಹೀಗಾಗಿ ವೀಕೆಂಡ್ ಪ್ಲ್ಯಾನ್ ಮಾಡಿದವರು ಸ್ವಲ್ಪ ಮುಂಹಾಗ್ರತ ಕ್ರಮವನ್ನು ತೆಗೆದುಕೊಳ್ಳಿ.

