ಬೆಂಗಳೂರು: ಅಸೆಂಬ್ಲಿಯಲ್ಲಿ ಚರ್ಚೆ ವೇಳೆ ಕರ್ನಾಟಕ ಕಾರಾಗೃಹಗಳ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಪ್ರಶ್ನಿಸಿದ್ದಾರೆ. ಕಾರಾಗೃಹದ ಪ್ರಶ್ನೆಗೆ ಸರಿಯಾದ ಉತ್ತರ ಸಿಗದ ಕಾರಣ ಶಾಸಕ ಯತ್ನಾಳ್, ಸಭಾಪತಿಗಳೇ ನಾನ್ ಕೇಳಿದ ಪ್ರಶ್ನೆ ತಪ್ಪಾ ಅಥವಾ ಸಚಿವರೇ ಸರಿಯಾದ ಉತ್ತರ ನೀಡಲಿಲ್ಲವಾ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಶಾಸಕ ಯತ್ನಾಳ್, ನಾನು ಕೇಳಿದ್ದು, ವಿಜಯಪುರ ಕೇಂದ್ರ ಕಾರಾಗೃಹ ಘಟಕಕ್ಕೆ ಕೆಎಸ್ಎಫ್ಐಎಸ್ಎಫ್ ಯಾಕೆ ನಿಯೋಜಿಸಿಲ್ಲ ಎಂದು ಪ್ರಶ್ನೆ ಕೇಳಿದ್ದೆ. ಆದರೇ ಸಚಿವರು ಕಾರಾಗೃಹ ಬಿಟ್ಟು ಜಲಾಶಯಕ್ಕೆ, ಎಸ್ಸಿ ಡಿ ಆರ್ ಎಫ್ ಗೆ ರಕ್ಷಣೆ ಕೊಡೋದನ್ನ ತಿಳಿಸಿದ್ದಾರೆ. ಗೊಂದಲದ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಕಾರಾಗೃಹದಲ್ಲಿ ಬಾರ್, ಮಾದಕ ದ್ರವ್ಯ, ಮೊಬೈಲ್ ಸಿಗುತ್ತಿದೆ. ಜೈಲಿನಲ್ಲಿರುವ ಎಲ್ಲಾ ಕೈದಿಗಳು ಐಶರಾಮಿ ಜೀವನವನ್ನ ಹೊರಗಡೆ ಮಾಡಿದಂಗೆ ಅಲ್ಲಿಯೂ ಮಾಡ್ತಾ ಇದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ.
ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದು, ನಮ್ಮ ಇಲಾಖೆಯಿಂದ ಏನೆಲ್ಲಾ ರಕ್ಷಣೆ ನೀಡಲಾಗಿದೆ ಎಂದು ಈಗಾಗಲೇ ಹೇಳಲಾಗಿದೆ. ಮೊದಲನೇ ಹಂತದಲ್ಲಿ ಕೇಂದ್ರ ಕಾರಾಗೃಹಗಳಿಗೆ ಕೈಗಾರಿಕಾ ಭದ್ರತಾ ಪಡೆಯನ್ನ ಒದಗಿಸಲಾಗಿದೆ. ಮೈಸೂರು, ಧಾರವಾಡ, ವಿಜಯಪುರ, ಕಲಬುರಗಿ, ಶಿವಮೊಗ್ಗ ಮಹಿಳಾ ಕಾರಾಗೃಹ ಸೇರಿ ಕೈಗಾರಿಕಾ ಭದ್ರತಾ ಪಡೆ ಸೇವೆ ಒದಗಿಸಲಾಗಿದೆ.
ಕಾನೂನು ಬಾಹಿರವಾಗಿ ಮಾದಕ ವಸ್ತು, ಫೋನ್ ಕರೆಗಳು ಹೋಗ್ತಿದೆ. ಇದರಿಂದ ಬಹಳ ಅನಾನುಕೂಲವಾಗುತ್ತೆ ಎಂಬ ಕಾರಣಕ್ಕೆ ಜೈಲಿನ ಸಿಬ್ಬಂದಿಗೆ ತಪಾಸಣೆ ಕೈಬಿಡಿಸಿ, ಕೈಗಾರಿಕಾ ಭದ್ರತೆ ಪಡೆಯನ್ನ ಎಲ್ಲಾ ಜೈಲಿಗೂ ವಿಸ್ತರಿಸಲಾಗಿದೆ ಎಂದು ಗೃಹಸಚಿವರು ಉತ್ತರ ನೀಡಿದ್ದಾರೆ.