ಬೆಂಗಳೂರು: ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ ಎಂದು ಸಚಿವ ಸಚಿವ ಮುನಿರತ್ನ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮಗಿರುವ ಮಾಹಿತಿ ಪ್ರಕಾರ,2 ಗಂಟೆಗೆ ಪುನೀತ್ ಮಗಳು ಬರ್ತಾರೆ ಅಲ್ಲಿಂದ ಕನೆಕ್ಟಿಂಗ್ ಫ್ಲೈಟ್ ಇರುತ್ತೆ ಇಲ್ಲ ಅಂದ್ರು ಸ್ಪೆಷಲ್ ಫ್ಲೈಟ್ ಮಾಡೋಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಸೂಚಿಸಿದ್ದಾರೆ.
ಪೋಲಿಸ್ ಇಲಾಖೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ಹಿಂದೆ ನಡೆದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರು ಕ್ರಮ ವಹಿಸಿದ್ದೇವೆ. ಇಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲಇಲ್ಲಿ ಗಣ್ಯವ್ಯಕ್ತಿಗಳಿಗೆ ಮಾತ್ರ ಇಲ್ಲಿ ಅವಕಾಶ. ಸ್ಟೇಡಿಯಂ ಹತ್ರ ಹೋಗಿ ಶಿವಣ್ಣನ ಬಳಿ ಮಾತನಾಡುತ್ತೇನೆ.
2 ಗಂಟೆಗೆ ಅಲ್ಲಿಗೆ ಬಿಟ್ಟರು ಮೆರವಣಿಗೆ ಮೂಲಕ ಮೂರು ಗಂಟೆಯಾದರೂ ಬೇಕು, ಸಂಜೆ 5 ಗಂಟೆಗೆ ಇಲ್ಲಿಗೆ ತಲುಪವ ಹಾಗೆ ಪ್ಲಾನ್ ಮಾಡಿದ್ದೇವೆ. ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ. ಎಲ್ಲರಿಗೂ ಸ್ಟೇಡಿಯಂನಲ್ಲಿ ದರ್ಶನದ ವ್ಯವಸ್ಥೆ ಮಾಡಿರುವುದರಿಂದ ಇಲ್ಲಿ ಗಣ್ಯರಿಗೆ ಮಾತ್ರ ಅವಕಾಶಅಂತ್ಯ ಕ್ರಿಯೆಗೆ ಗಣ್ಯರಿಗೆ,ಕುಟುಂಬಸ್ಥರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದರು.