ಬೆಂಗಳೂರು: ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಇಂದು ಪ್ರತಿಭಟನೆ ನಡೆಸಿದ್ದರು. ಎಲ್ಲರೂ ಒಟ್ಟಾಗಿ ಒಂದೇ ಸಮಯಕ್ಕೆ ಸರ್ಕಾರಿ ಸೇವೆ ಬಂದ್ ಮಾಡಿದ್ದರು. ಪರೀಕ್ಷೆ ಬೇರೆ ಹತ್ತಿರ ಬರುತ್ತಿದೆ, ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆಗಿತ್ತು. ಇನ್ನು ಸಮಯವಾದರೆ ಸಮಸ್ಯೆ ದೊಡ್ಡದಾಗುತ್ತೆ ಎಂದು ಅರಿತುಕೊಂಡ ಸಿಎಂ ಬೊಮ್ಮಾಯಿ ಅವರು, ವೇತನ ಹೆಚ್ಚಳಕ್ಕೆ ಅನುಮತಿ ನೀಡಿದ್ದಾರೆ.
ಏಪ್ರಿಲ್ 1ರಿಂದಾನೇ ವೇತನ ಜಾರಿಯಾಗಲಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ಅಧಿಕೃತ ಆದೇಶದ ಬೆನ್ನಲ್ಲೇ ಸರ್ಕಾರಿ ನೌಕರರು ಮುಷ್ಕರವನ್ನು ವಾಪಾಸ್ ಪಡೆದಿದ್ದಾರೆ. ವಿಧಾನಸಭೆಯಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು, ಸಿಎಸ್ ಹಾಗೂ ಒಂಭತ್ತು ಮಂದಿ ಸಚಿವರ ಜೊತೆಗಿನ ಸಭೆ ಬಳಿಕ ಮುಷ್ಕರ ವಾಪಸ್ ಪಡೆದಿದ್ದಾರೆ.
ಬಳಿಕ ಷಡಕ್ಷರಿ ಮಾತನಾಡಿ, ಸರ್ಕಾರ ಶೇಕಡ 17 ರಷ್ಟು ವೇತನ ಹೆಚ್ಚಳ ಮಾಡಿದೆ. ನಾವೂ 25 ರಷ್ಟು ವೇತನ ಹೆಚ್ಚಳ ಕೇಳಿದ್ದೆವು. ಆದ್ರೆ ಸರ್ಕಾರ 17 ರಷ್ಟು ಮಾಡಿದೆ. ಇದನ್ನು ನಾವೂ ಒಪ್ಪಿದ್ದೇವೆ. ಇದನ್ನು ನಾನು ಒಬ್ಬನೇ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ.