ದಶಪಥ ರಸ್ತೆ ಉದ್ಘಾಟಿಸಲು ಮೈಸೂರಿಗೆ ಬಂದಿಳಿದ ಪ್ರಧಾನಿ : ಏನೆಲ್ಲಾ ಕಾರ್ಯಕ್ರಮ ಡಿಟೈಲ್ ಇಲ್ಲಿದೆ..!

ಮಂಡ್ಯ: ಚುನಾವಣೆ ಹತ್ತಿರವಾಗುತ್ತಲೇ ಹಳೆ ಮೈಸೂರು ಭಾಗವನ್ನು ಕಬಳಿಸುವ ಬಿಜೆಪಿಯ ತಂತ್ರಕ್ಕೆ ಹೈಕಮಾಂಡ್ ನಾಯಕರೇ ಪ್ರಚಾರಕ್ಕೆ ಬರ್ತಾ ಇದ್ದಾರೆ. ಇಂದು ಬೆಂಗಳೂರು – ಮೈಸೂರು ದಶಪಥ ರಸ್ತೆ ಉದ್ಘಾಟನೆಯ ನೆಪವಾಗಿ ಮತ್ತೆ ಪ್ರಧಾನಿ ಮೋದಿಯವರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇಂದು ದಶಪಥ ರಸ್ತೆಯನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ.

ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ರಸ್ತೆ ಸುಮಾರು 119 ಕಿ.ಮೀ ಉದ್ದದ ಹೆದ್ದಾರಿಯಾಗಿದೆ. ಇದಕ್ಕೆ 2019ರಲ್ಲಿ ಕೇಂದ್ರದಿಂದ ಅನುಮೋದನೆ ಸಿಕ್ಕಿತ್ತು. ದಶಪಥ ಹೈವೆರ 2014ರಲ್ಲಿ ನ್ಯಾಷನಲ್ ಹೈವೇ ಅಂತ ಡಿಕ್ಲೇರ್ ಆಗಿತ್ತು. ಈ ರಸ್ತೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಸಂಚರಿಸಬಹುದಾಗಿದೆ.

ಇನ್ನು ಈ ರಸ್ತೆಯಲ್ಲಿ 8 ಕಿ.ಮೀ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 50 ಅಂಡರ್ ಪಾಸ್ ಗಳು, 11 ಓವರ್ ಪಾಸ್ ಗಳು ಇದೆ. 4 ರೈಲ್ವೇ ಮೇಲ್ಸೇತುವೆಗಳು, 5 ಬೈಪಾಸ್ ಗಳು ಕಂಡು ಬರುತ್ತವೆ. ಈ ದಶಪಥ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದು, ಬಳಿಕ ಗಜ್ಜಲಗೆರೆ ಬಳಿ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *