ಬೆಂಗಳೂರು: ರಾಜಕಾರಣಿಗಳು ಹಾಕುವ ವಾಚ್ ಗಳ ಮೇಲೆ ಸಾಕಷ್ಟು ಬಾರಿ ಚರ್ಚೆಯಾಗುವುದುಂಟು. ಯಾಕಂದ್ರೆ ಆ ವಾಚ್ ಗಳು ದೊಡ್ಡ ಬ್ರ್ಯಾಂಡ್ ಗಳದ್ದಾಗಿರುತ್ತದೆ ಹಾಗೇ ದುಬಾರಿ ಬೆಲೆಯದ್ದಾಗಿರುತ್ತದೆ. ಅದೇ ರೀತಿ ಮೊನ್ನೆಯಷ್ಟೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕಟ್ಟಿದ ವಾಚ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅವರಿಬ್ಬರು ದುಬಾರು ವಾಚ್ ಕಟ್ಟಿದ್ದಾರೆ ಅದರಲ್ಲೂ ಅದರ ಬೆಲೆ 43 ಲಕ್ಷ ಆದ್ರೂ ಇರುತ್ತೆ ಎಂಬ ಚರ್ಚೆಗಳು. ಇದೀಗ ಅದರ ಬೆಲೆ 43 ಲಕ್ಷ ಅಲ್ಲ 25 ಲಕ್ಷ ಎಂಬುದಾಗಿ ಡಿಕೆ ಶಿವಕುಮಾರ್ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಇದು ನನ್ನ ಸ್ವಂತ ವಾಚ್. ನಾನು ಆಸ್ಟ್ರೇಲಿಯಾದಲ್ಲಿ ಕಳೆದ 7 ವರ್ಷದ ಹಿಂದೆ ಖರೀದಿಸಿದ್ದೆ. 25 ಲಕ್ಷ ರೂಪಾಯಿ ವಾಚ್ ಇದು. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ದೇನೆ. ನನ್ನ ತಂದೆ ಬಳಿ ಏಳು ವಾಚ್ ಇತ್ತು. ನನ್ನ ವಾಚ್ ಬಗ್ಗೆ ಚುನಾವಣೆ ಅಫಿಡೆವಿಟ್ ನಲ್ಲೂ ಘೋಷಣೆ ಮಾಡಿಕೊಂಡಿದ್ದೇನೆ. ಅವರಿಗೆ (ಬಿಜೆಪಿ) ಯಾವ ವಾಚ್ ಬೇಕೋ ಅದನ್ನು ಧರಿಸುವ ಹಕ್ಕಿದೆ. ಅವರ ಮಗ ಅವರಿಗೆ ಗಿಫ್ಟ್ ಮಾಡಿರಬಹುದು. ಅವರಿಗೆ ಆ ವಾಚ್ ಖರೀದಿಸುವ ಸಾಮರ್ಥ್ಯವಿದೆ ಎಂದಿದ್ದಾರೆ.
ಇನ್ನು ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದೇ ಬ್ರ್ಯಾಂಡ್ ನ ವಾಚ್ ಅನ್ನು ಕಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯಾದ ಸನ್ನಿವೇಶ ಕಂಡು ಬಂದಿದೆ. ಅದರಲ್ಲೂ ಇಬ್ಬರ ಕೈಯಲ್ಲೂ ಸ್ಯಾಂಟೋಸ್ ಕಾರ್ಟಿಯರ್ ಕಂಪನಿಯ ವಾಚ್ ಇರೋದು ನಿನ್ನೆ ಡಿಕೆ ಶಿವಕುಮಾರ್ ಮನೆಯ ಚೇರ್ ನಲ್ಲಿ ಇಬ್ಬರು ಕುಳಿತಿದ್ದಾಗ, ಪೋಟೋದಲ್ಲಿ ಕಂಡು ಬಂದಿದೆ.
