ಅಡಿಕೆ ಬೆಳೆಗಾರರಲ್ಲಿ ಮತ್ತೆ ಖುಷಿಯಾಗುವ ದಿನ ಸಂಭವಿಸಿದೆ. 55 ಸಾವಿರ ರೂಪಾಯಿಗೆ ತಲುಪಿತ್ತು. ಆದರೆ ಇದ್ದಕ್ಕಿದ್ದ ಹಾಗೇ 44 ಸಾವಿರಕ್ಕೆ ಬಂದು ನಿಂತಿತ್ತು. ಇದು ಅಡಿಕೆ ಬೆಳೆಗಾರರಿಗೆ ಶಾಕ್ ಆಗಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳುವ ಹಂತ ತಲುಪಿದೆ. ಮೊದಲೇ ಕೊಳೆ ರೋಗ, ಒಣರೋಗದಿಂದ ಅಡಿಕೆ ಫಸಲು ಕುಸಿಯುವುದಕ್ಕೆ ಶುರುವಾಗಿತ್ತು. ರೈತರನ್ನು ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆನೆ ಕಷ್ಟವಾಗಿತ್ತು. ಇಂಥ ಸಂದರ್ಭದಲ್ಲಿ ಬೆಲೆ ಕಡಿಮೆಯಾಗಿದ್ದು ರೈತರಿಗೆ ಆತಂಕವೂ ಆಗಿತ್ತು. ಇದೀಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ.
ಭದ್ರಾವತಿಯ ರಾಶಿ ಅಡಿಕೆ 50,300 ರೂಪಾಯಿಗೆ ಮಾರಾಟವಾಗಿದೆ. ಇನ್ನು ಶಿವಮೊಗ್ಗ ಮಾರುಕಟ್ಟೆಯಲ್ಲಿ ಕನಿಷ್ಠ 31,400 ರೂಪಾಯಿ ಇದ್ದ ಅಡಿಕೆ ಗರಿಷ್ಠ 49,899 ರೂಒಅಯಿಗೆ ಮಾರಾಟವಾಗಿದೆ. ಉಳಿದಂತೆ ಸರಕು ಅಡಿಕೆ ಕ್ವಿಂಟಾಲ್ ಗೆ 48,000 ರೂಪಾಯಿ ಇತ್ತು. ಆದರೆ 80,210 ರೂಪಾಯಿ ಆಗಿದೆ.
ಯಾವ್ಯಾವ ಅಡಿಕೆ, ಎಷ್ಟೆಷ್ಟು ರೂಪಾಯಿಗೆ ಮಾರಾಟವಾಗಿದೆ ಎಂಬ ವರದಿ ಇಲ್ಲಿದೆ:
ಶಿವಮೊಗ್ಗ ಬೆಟ್ಟೆ ಅಡಿಕೆ ಕನಿಷ್ಠ 52,114 ಇದ್ದು ಗರಿಷ್ಠ 57,629 ಮಾರಾಟವಾಗಿದೆ. ರಾಶಿ ಅಡಿಕೆ ಕನಿಷ್ಠ 31,400 ಇದ್ದು ಗರಿಷ್ಠ 49,899 ಮಾರಾಟವಾಗಿದೆ. ಸರಕು ಅಡಿಕೆ ಕನಿಷ್ಠ 48,000 ಇದ್ದು ಗರಿಷ್ಠ 80,210 ಮಾರಾಟವಾಗಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 45,000 ಇದ್ದು ಗರಿಷ್ಠ 50,799 ಮಾರಾಟವಾಗಿದೆ.
ಕೊಬ್ಬರಿ ಬೆಲೆ ಹೀಗಿದೆ: ಅರಸೀಕೆರೆ ಮಾರುಕಟ್ಟೆಯಲ್ಲಿ ಬೇರೆ ಕೊಬ್ಬರಿ ಕನಿಷ್ಠ 9,800 ಇದ್ದು ಗರಿಷ್ಠ 9,800 ಮಾರಾಟವಾಗಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಕನಿಷ್ಟ 14,310 ಇದ್ದು 14,310 ಮಾರಾಟವಾಗಿದೆ. ತುಮಕೂರಿನಲ್ಲಿ ಬೇರೆ ವಿಧ ಕನಿಷ್ಠ 10,000 ಇದ್ದು 11,500 ಮಾರಾಟವಾಗಿದೆ. ದಾವಣಗೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಕನಿಷ್ಠ 9,660 ಇದ್ದು 9,660 ಮಾರಾಟವಾಗಿದೆ.