ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ಬದ ಬೆಲೆಯಲ್ಲೂ ವಿಪರೀತವಾಗಿದೆ. ಅದರಲ್ಲೂ ಡಿಸೆಂಬರ್ 15 ರ ತನಕವೂ ಮದುವೆ, ಶುಭ ಸಮಾರಂಭಗಳು ಇದಾವೆ. ಹೀಗಿರುವಾಗ ಚಿನ್ನದ ಅಗತ್ಯ ಎಲ್ಲರಿಗೂ ಇರುತ್ತದೆ. ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ವರ್ಗದವರ ಮೇಲೆ ಇದು ಪರಿಣಾಮ ಬೀರುತ್ತಿದೆ.
ಇಂದು ಗ್ರಾಂಗೆ 70 ರೂಪಾಯಿ ಏರಿಕೆಯಾಗಿರುವ ಚಿನ್ನ, 22 ಕ್ಯಾರೆಡ್ ಗೆ 7,225 ರೂಪಾಯಿ ಹತ್ತಿರಕ್ಕೆ ಸಾಗಿದೆ. ಇನ್ನು ಅಪರಂಜಿ ಚಿನ್ನ ಗ್ರಾಂಗೆ 7,900 ರೂಪಾಯಿ ಸಮೀಪಕ್ಕೆ ಹೋಗಿದೆ. 18 ಕ್ಯಾರೆಟ್ ಚಿನ್ನ ಗ್ರಾಂಗೆ 5,900 ರೂಪಾಯಿ ಗಡಿ ದಾಟಿದೆ. ಹಾಗೇ 10 ಗ್ರಾಂ 22 ಕ್ಯಾರೆಟ್ ಚಿನ್ನ ಈಗ 72,250 ರೂಪಾಯಿ ಆಗಿದೆ. ಅಪರಂಜಿ ಚಿನ್ನ ಹತ್ತು ಗ್ರಾಂಗೆ 78,820 ರೂಪಾಯಿ ಆಗಿದೆ. ಹಾಗಾದ್ರೆ ಯಾವ್ಯಾವ ನಗರದಲ್ಲಿ ಎಷ್ಟೆಷ್ಟು ರೇಟ್ ಇದೆ ಎಂಬುದನ್ನು ನೋಡುವುದಾದರೆ:
ಬೆಂಗಳೂರಿನಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆ 72,250 ರೂಪಾಯಿ ಇದ್ರೆ, ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಸದ್ವರದಲ್ಲೂ 72,250 ಇದೆ. ಉಳಿದಂತೆ ದೆಹಲಿ, ಅಹ್ಮದಾಬಾದ್, ಜೈಪುರದಲ್ಲಿ ಎಋಇಳಿತವಾಗಿದೆ.
ಇನ್ನು ಬೆಳ್ಳಿ ಬೆಲೆಯನ್ನು ನೋಡುವುದಾದರೆ ಹತ್ತು ಗ್ರಾಂ ಬೆಳ್ಳಿಗೆ 9,200 ರೂಪಾಯಿ ಆಗಿದೆ.