ಬೆಂಗಳೂರು: ಆಗಸ್ಟ್ 1 ರಿಂದ ರಾಜ್ಯದಲ್ಲಿ ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಾಲಿನ ದರವೂ ಇಂದಿನಿಂದ 3 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಹೊಟೇಲ್ ನ ಆಹಾರ ಪದಾರ್ಥದಲ್ಲೂ ಏರಿಕೆಯಾಗುತ್ತಿದೆ. ಅದರಲ್ಲೂ ದಾವಣಗೆರೆ ಬೆಣ್ಣೆ ದೋಸೆಯಲ್ಲೂ ಏರಿಕೆ ಕಂಡಿದೆ.
ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಬೆಣ್ಣೆಯ ದರವೂ ಏರಿಕೆಯಾಗಿದೆ. ಹೀಗಾಗಿ ಪ್ರತಿ ಬೆಣ್ಣೆ ದೋಸೆಯ ಮೇಲೆ 10 ರೂಪಾಯಿ ಏರಿಕೆಯಾಗಿದೆ. ದಾವಣಗೆರೆ ದೋಸೆ ಬೆಷ್ಣೆ ಪ್ರಿಯರು ಇನ್ಮುಂದೆ ಹತ್ತು ರೂಪಾಯಿ ಹೆಚ್ಚಿಗೆ ಕೊಡಬೇಕಾಗುತ್ತದೆ. ಬೆಣ್ಣೆಯ ಹೆಚ್ಚಿನ ದರವನ್ನೇ ಏರಿಕೆ ಮಾಡಿದೆ.
ಈ ಹಿಂದೆಲ್ಲ ಪ್ರತಿ ಕೆಜಿಗೆ 550 ರೂಪಾಯಿ ಇತ್ತು. ಆದ್ರೆ ಈಗ ಹಾಲಿನ ದರ ಏರಿಕೆಯಾದ ಮೇಲೆ ಕೆಜಿ ಬೆಣ್ಣೆಗೆ 700 ರೂಪಾಯಿ ಆಗಿದೆ. ಅಷ್ಟೇ ಅಲ್ಲ ತರಕಾರಿ ಬೆಲೆಯೂ ಗಗನಕ್ಕೇರಿದೆ. ದೋಸೆಯ ಚಟ್ನಿಗೆ ಬಳಸುವ ಹಸಿಮೆಣಸಿನಕಾಯಿಯ ದರವೂ ಏರಿಕೆಯಾಗಿದೆ. ಹೀಗಾಗಿ ಬೆಣ್ಣೆ ದೋಸೆ ಬೆಲೆಯೂ ಏರಿಕೆ ಕಂಡಿದೆ.