ನವದೆಹಲಿ: ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಮತ್ತೆ ಏರಿಕೆಯಾಗುತ್ತಲೆ ಇದೆ. ಕಳೆದ ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ 250 ರೂಪಾಯಿ ಏರಿಕೆಯಾಗಿತ್ತು. ಇದೀಗ ಒಂದೇ ತಿಂಗಳಿಗೆ ಮತ್ತೆ ಏರಿಕೆಯಾಗಿದ್ದು, ಇಂದು 102.50 ರೂಪಾಯಿಯನ್ನು ಪ್ರತಿ ಕೆಜಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಆಟೋ ಡ್ರೈವರ್ ಗಳು ಚಿಂತೆಗೀಡಾಗಿದ್ದಾರೆ.
ಒಂದು ತಿಂಗಳ ಹಿಂದೆಯಷ್ಟೇ ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್ ಮೇಲೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಲ್ಲಿ ಹೆಚ್ಚಳವಾಗಿದೆ. ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್ ನಲ್ಲಿ ಹೆಚ್ಚಳವಾಗಿಲ್ಲ. ಇಂದಿನ ಕಮರ್ಷಿಯಲ್ ಸಿಲಿಂಡರ್ ಬೆಲೆ 2,355 ರೂಪಾಯಿ ಆಗಿದೆ.
19 ಕೆಜಿ ಸಿಲಿಂಡರ್ ಬೆಲೆ ಮೇ 1ರಿಂದ 102 ರೂಪಾಯಿ ಏರಿಕೆ ಕಾಣಲಿದೆ. ಹೀಗೆ ದಿನೇ ದಿನೇ ಬೆಲೆ ಏರಿಕೆಯನ್ನು ಮಾಡುತಚತಲೆ ಹೊರಟರೆ ಜೀವನ ನಡೆಸುವುದು ಹೇಗೆ ಎಂಬುದು ಜನ ಸಾಮಾನ್ಯರ ಗೋಳಾಟವಾಗಿದೆ. ಗೃಹ ಬಳಕೆಯ ಸಿಲಿಂಡರ್ ನಲ್ಲೂ ಏರಿಕೆ ಮಾಡಲ್ಲ ಎಂಬ ಯಾವ ನಿರೀಕ್ಷೆಗಳು ಇಲ್ಲ. ಕಳೆದ ಬಾರಿ ಕಮರ್ಷಿಯಲ್ ಸಿಲಿಂಡರ್ ಆದ ಬಳಿಕ ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಮತಚತೆ ಏರಿಕೆ ಮಾಡಬಹುದು ಎಂಬ ತಲೆ ನೋವು ಶುರುವಾದಂತಾಗಿದೆ.