ಸುದ್ದಿಒನ್, ಚಿತ್ರದುರ್ಗ,ಜ. 25 : ನಮ್ಮ ಪೂರ್ವಿಕರ ಆಚಾರಗಳು ವೈಜ್ಞಾನಿಕ ತಳಹದಿಯ ಮೇಲೆ ನಿರೂಪಿತವಾಗಿವೆ. ಆ ಕಾರಣಕ್ಕಾಗಿ ಅವರ ಪ್ರತಿಯೊಂದು ಆಚರಣೆಯಲ್ಲಿಯೂ ವೈಜ್ಞಾನಿಕತೆ ಬಿಟ್ಟಿಲ್ಲ. ಉದಾರಣೆ ಬೆಳಗ್ಗೆ ಬೇಗ ಏಳುವುದರಿಂದ ,ಆ ಸಂದರ್ಭದ ನಡಿಗೆ ಅಥವಾ ಕೆಲಸಗಳಿಂದ ನಮಗೆ ಉತ್ತಮವಾದ ಆಕ್ಸಿಜನ್ ದೊರಕುತ್ತದೆ. ಬೋಧಿವೃಕ್ಷದ ಸುತ್ತುವುದಲ್ಲ. ಅದರ ಕೆಳಗೆ ಕುಳಿತು ಅಥವಾ ಧ್ಯಾನ ಮಾಡಿದರೆ ಎಷ್ಟೊಂದು ಆಮ್ಲಜನಕ ನಮಗೆ ನಿರಾಯಸವಾಗಿ ದೊರಕುತ್ತದೆ. ಇನ್ನು ಹಳ್ಳಿಗಳಲ್ಲಿನ ಬೆಳಗಿನ ಚಟುವಟಿಕೆಗಳಂತೂ ಎಂತಹ ಹಿತಕರವಾಗಿರುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತಿದೆ ಎಂದು ಮುರುಘಾಮಠದ ಸಾಧಕ ಶ್ರೀಗಳವರಾದ ಮುರುಘೇಂದ್ರ ಸ್ವಾಮೀಜಿಗಳು ನುಡಿದರು.
ಶ್ರೀಗಳವರು ರಥಸಪ್ತಮಿ ಪ್ರಯುಕ್ತ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನಿರಂತರವಾಗಿ ಉಚಿತವಾಗಿ ನಡೆಯುತ್ತಿರುವ ಆಯುಷ್ ಯೋಗ ಶಿಕ್ಷಣ ಕೇಂದ್ರದ ವತಿಯಿಂದ ಇಂದು ಬೆಳಗಿನ ಸಂದರ್ಭ ಏರ್ಪಡಿಸಿದ್ದ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡುತ್ತಾ ನಮಗೆ ಗೊತ್ತಿಲ್ಲದಂತೆ ವಿಜ್ಞಾನ ನಮ್ಮ ಆಚರಣೆಯಲ್ಲಿ ಇದ್ದೇ ಇದೆ. ಅದು ಮೂಡನಂಬಿಕೆ ಅಲ್ಲ ,ವಿಜ್ಞಾನ .ವಿಜ್ಞಾನದಲ್ಲಿ ಅಂಧ ಆಚರಣೆಗಳನ್ನು ಆಚರಿಸಲು ಅವಕಾಶವಿಲ್ಲ. ಹಾಖಯೇ ಯೋಗವು ಸಹ ವೈಜ್ಞಾನಿಕ ತಳಹದಿಯ ಮೇಲೆ ನಿರೂಪಿತವಾಗಿದೆ. ಯಾವುದನ್ನೇ ಆಗಲಿ ನಾವು ಮೂಢನಂಬಿಕೆಯ ಆಧಾರದ ಮೇಲೆ ಆಚರಿಸುವುದಕ್ಕಿಂತ ಸತ್ಸಂಪ್ರದಾಯಗಳ ಆಚರಣೆಗೆ ಒತ್ತು ಕೊಡಬೇಕೆಂದು ಕರೆ ನೀಡಿದರು.
ಆಯುಷ್ ಯೋಗ ಕ್ಷೇಮ ಕೇಂದ್ರದ ಚಿತ್ರದುರ್ಗ ಜಿಲ್ಲೆಯ ಅಧ್ಯಕ್ಷರಾದ ಬಿ. ಆರ್. ಪ್ರಸನ್ನ ಕುಮಾರ್ ಮಾತನಾಡಿ ರಥಸಪ್ತಮಿ ದಿನದಂದು ಸೂರ್ಯ ಜನ್ಮ ತಾಳಿದ ಬಗೆಗೆ ಮಾತನಾಡಿದರು. ಯೋಗ ಶಿಕ್ಷಣ ಕೇಂದ್ರದ ಎಂ. ಆರ್. ಮಂಜುನಾಥ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಲ್. ಎಸ್ .ಬಸವರಾಜ್ ಅವರು ಶರಣು ಸಮರ್ಪಣೆಯನ್ನು ಮಾಡಿದರು ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ್ .ಜಿ , ಶಿವಯೋಗಿ, ಜಿ. ವೀರಣ್ಣ , ಲೋಕೇಶ್, ರಾಮಾಂಜನೇಯ ಮತ್ತಿತರ ಯೋಗಾಸಕ್ತರು ಭಾಗವಹಿಸಿ 108 ಸೂರ್ಯ ನಮಸ್ಕಾರವನ್ನು ಈ ಸಂದರ್ಭದಲ್ಲಿ ನೆರವೇರಿಸಿದರು.






