ಭದ್ರತೆಯ ನಡುವೆಯೂ ಸಿಎಂ ಬಳಿ ನುಗ್ಗಿದ್ದ ವ್ಯಕ್ತಿ : 1993ರಲ್ಲಿ ಬರೆದಿದ್ದ ಫಲಿತಾಂಶ ಕೇಳಲು ಹೋದರಾ..?

suddionenews
1 Min Read

ಬೆಂಗಳೂರು: ನಿನ್ನೆ ಗಣರಾಜ್ಯೋತ್ಸವದ ಸಂಭ್ರಮದ ಕ್ಷಣದಲ್ಲಿ ಮಾಣಿಕ್ ಶಾ ಪರೇಡ್ ಮೈದಾನದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಭದ್ರತೆಯನ್ನು ನೀಡಲಾಗಿತ್ತು. ಆದರೆ ಈ ಭದ್ರತೆಯನ್ನು ದಾಟಿ, ಪರಶುರಾಮ್ ಎಂಬ ವ್ಯಕ್ತಿ ಸಿಎಂ ಬಳಿಗೆ ಬರಲು ಯತ್ನಿಸಿದ್ದರು. ಇದೀಗ ಪರಶುರಾಮ್ ಅವರ ಹಿನ್ನೆಲೆ ತಿಳಿದಿದ್ದು, ಸಿಎಂ ಬಳಿ ಹೋಗಲು ಯತ್ನಿಸಿದ್ದು ಯಾಕೆ ಎಂಬುದು ಗೊತ್ತಾಗಿದೆ.

 

ಪಾಕ್ಷಿಕ ಪತ್ರಿಕೆಯ ಸಂಪಾದಕನ ಹೆಸರಲ್ಲಿ ಪಾಸ್ ಪಡೆದು, ನಿನ್ನೆ ಮೈಸೂರಿನಿಂದ ಬೆಂಗಳೂರಿಗೆ ಬಂದು, ಕಾರ್ಯಕ್ರಮ ಅಟೆಂಡ್ ಮಾಡಿದ್ದಾರೆ. ಪರಶುರಾಮ್ ಈ ರೀತಿ ಸಿಎಂ ಬಳಿ ನುಗ್ಗಿರುವುದು ಇದೇ ಮೊದಲೇನು ಅಲ್ಲ. 2017ರಲ್ಲೂ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸಮಸ್ಯೆಯ ಕಡೆಗೆ ಗಮನ ಹರಿಸುವಂತೆ ಸೂಚಿಸಿದ್ದರು. ಆಗಲೂ ಸಮಸ್ಯೆ ಬಗೆಹರಿದಿರಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲೂ ಪಟಾಕಿ ಸಿಡಿಸಿ ಅವಾಂತರ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಈ ರೀತಿಯ ವಿಚಿತ್ರ ನಡವಳಿಕೆಗೆ ಪರಶುರಾಮ್ ಬರೆದಿದ್ದ ಕೆಪಿಎಸ್ಸಿ ಪರೀಕ್ಷೆಯೇ ಕಾತಣವಾಗಿದೆ.

 

ಪರಶುರಾಮ್ 1993ರಲ್ಲಿಯೇ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಫಲಿತಾಂಶವನ್ನು ಕಾಯ್ದಿರಿಸಿದೆ. ಫಲಿತಾಂಶಕ್ಕಾಗಿ ಪರಶುರಾಮ್ ಅನೇಕ ಬಾರಿ ಸರ್ಕಸರಿ ಕಚೇರಿಗೆ ಅಲೆದಾಡಿದ್ದಾರೆ. ಆದರೆ ಫಲಿತಾಂಶ ಮಾತ್ರ ಬಂದಿಲ್ಲ. ಹೀಗಾಗಿ ನಿನ್ನೆಯೂ ಅವಾಂತರ ಸೃಷ್ಟಿಸಿದ್ದರು. ತಕ್ಷಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *