ಚಾಮರಾಜನಗರ: ಇಂದು ರಾಜ್ಯದ 224 ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಕೆಲವೊಂದು ಕಡೆ ಮತದಾನ ಬಹಿಷ್ಕಾರ ಮಾಡಿರುವಂತ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ನಡೆಸಿದ್ದಾರೆ.
ಮೂಲ ಸೌಕರ್ಯ ಹಾಗೂ ರಸ್ತೆ ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕೆ ಇಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಿಕೊಡುವ ತನಕ ಮತದಾನ ಮಾಡಲ್ಲ ಎಂದಿದ್ದಾರೆ. ಯಾವ ಜನಪ್ರತಿನಿಧಿಗಳು ಕೂಡ ನಮಗೆ ಮೂಲಸೌಕರ್ಯ ಒದಗಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಮೂಲ ಸೌಕರ್ಯ ಒದಗಿಸುವ ತನಕ ನಾವೂ ಮತದಾನಕ್ಕೆ ಬರಲ್ಲ ಅಂತ ಹೇಳಿ 101 ಮತದಾರರು ಬಹಿಷ್ಕಾರ ಹಾಕಿದ್ದಾರೆ. ಇನ್ನು ಎಷ್ಟೋ ಕಡೆ ಮತದಾರರ ಪಟ್ಟಿಯಲ್ಲಿ ಹೆಸರುಗಳೇ ಬಿಟ್ಟು ಹೋಗಿದೆ. ವೋಟ್ ಮಾಡಲು ಹೋದಾಗ ವಿಚಾರ ಬೆಳಕಿಗೆ ಬಂದಿದೆ. ಸಾಕಷ್ಟು ಜನ ವೋಟ್ ಹಾಕದೆ ವಾಪಸ್ ಬಂದಿದ್ದರೆ, ಇನ್ನಷ್ಟು ಜನ. ಚಾಲೆಂಜಿಂಗ್ ವೋಟ್ ಮಾಡಿ ಬಂದಿದ್ದಾರೆ.





GIPHY App Key not set. Please check settings