ಬೆಂಗಳೂತು: ಬೆಂಗಳೂರು ಉಸ್ತುವಾರಿ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಪಕ್ಷ ಮತ್ತು ಸಿಎಂ ಯಾರಾಗಬೇಕು ಅಂತ ಸೂಚಿಸಲಿದ್ದಾರೆ. ಯಾರು ಕೂಡ ಬೇಕು ಅಂತ ಕೇಳಿಕೊಂಡು ಹೋಗುವುದಿಲ್ಲ. ಉಸ್ತುವಾರಿ ಸಚಿವರಾಗಲು ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಕೆಲಸ ಮಾಡಲು ಪೈಪೋಟಿ ಏನಿಲ್ಲ. ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕ ಕೆಲಸ ಮಾಡಬೇಕು. ಪಕ್ಷವನ್ನ ಯಾವ ರೀತಿ ಗೆಲ್ಲಿಸಬೇಕು ಅನ್ನೋ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆ ಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವಿಚಾರಕ್ಕೆ ಇಂದು ಸಭೆ ನಡೆದಿದೆ.
ಪಕ್ಷದ ಪರವಾಗಿ ಯಾರು ಅಭ್ಯರ್ಥಿ ಆಗಬೇಕು ಅನ್ನೋ ವಿಚಾರ ಕುರಿತು ಚರ್ಚೆ ನಡೆಸಲಾಯಿತು.ಜಿಲ್ಲಾ ಮುಖಂಡರು ಸಾಕಷ್ಟು ಸಲಹೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನ ಮಾಡಲಾಗಿದೆ, ಈ ಭಾರಿ ಬಿಜೆಪಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ಕಡೆ ನಡೆಯಲಿರುವ ಉಪ ಚುನಾವಣೆ ಯಲ್ಲಿ ನಾವು ಗೆಲುತ್ತೇವೆ
ಖಂಡಿವಾಗಿ ನಾವು ಗೆಲ್ತವಿ ಇದರಲ್ಲಿ ಯಾವುದೇ ಅನುಮಾವಿಲ್ಲ.
ಅಭ್ಯರ್ಥಿ ಯಾರ ಆಗಬೆಕು ಅನೋದನ್ನ ಪಕ್ಷ ತೀರ್ಮಾನ ಮಾಡುತ್ತೆಬಹಳ ಸ್ಪಷ್ಟವಾಗಿ ಹೇಳ್ತಿನಿ , ನಾವು ಸದೃಢವಾಗಿರು ಎಲ್ಲಾ ತಯಾರಿ ನಡೆದಿದೆ. ರಾಜ್ಯದಲ್ಲಿ ಎಲ್ಲ ಭಾಗಗಳಲ್ಲೂ ಪಕ್ಷ ಬಲಿಷ್ಠವಾಗಿ ಕಟ್ಟಲು ತಯಾರಿ ಆಗ್ತಾಯಿದೆ..
ಎಲ್ಲೂ ಹೊಂದಾಣಿಕೆಯಿಲ್ಲ ೨೪ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ, ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ
ಎಲ್ಲಾ ಕಡೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸ್ತಿವಿ ಯಾರ ಜೊತೆಗೂ ಹೊಂದಾಣಿಕೆಯಿಲ್ಲ ಎಂದರು.