ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವಾಸದಲ್ಲಿ ಬೆಳಗ್ಗೆ 5 ಗಂಟೆಯಿಂದ ಸರಸ್ವತಿ ಪೂಜೆ ಆರಂಭವಾಗಿದೆ. ಸರಸ್ವತಿ ಪೂಜೆಗೆ ಶೃಂಗೇರಿ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿರುವ ಡಿ ಕೆ ಶಿವಕುಮಾರ್, ಶೃಂಗೇರಿ ಶಾರದಾ ಪೀಠದ ಗುರುಗಳು ನಮ್ಮ ಮನೆಗೆ ಬಂದಿದ್ರು. ಗುರುವಂದನಾ ಮಾಡುವ ಅವಕಾಶ ಸಿಕ್ಕಿತು. ಕರ್ನಾಟಕ, ಭಾರತದಲ್ಲಿ ಶಂಕರಾಚಾರ್ಯ ಸ್ಥಾಪಿಸಿದ ಈ ಪೀಠ ತನ್ನದೇ ಆದ ಪಾವಿತ್ರ್ಯಾತೆ ಹೊಂದಿದೆ. ತಾಯಿ ಸರಸ್ವತಿ ಎಲ್ಲರಿಗೂ ಹರಸಲಿ. ನಮ್ಮ ಕುಟುಂಬಕ್ಕೆ, ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದಿದ್ದಾರೆ.
ಇದೆ ವೇಳೆ ದೇವೆಗೌಡರ ಬಗ್ಗೆ ರಾಜಣ್ಣನವರು ಕೊಟ್ಟ ಹೇಳಿಕೆ ವಿಚಾರವಾಗಿ ಮಾತನಾಡಿ, ಪಕ್ಷಕ್ಕೂ ರಾಜಣ್ಣನವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಕ್ಷಮೆ ಕೇಳಬೇಕು ಎಂದು ವರಿಷ್ಠರು ನಾನು ಸೂಚನೆ ನೀಡಿದ್ದೇನೆ. ರಾಜಣ್ಣನವರು ಗೌರವದಿಂದ ತಪ್ಪಾಯಿತು ಅಂತ ಹೇಳಿದ್ದಾರೆ. ಆ ವಿಚಾರವನ್ನ ಅಲ್ಲಿಗೆ ಬಿಡೋಣ. ಒಂದಿನ ನಮ್ಮನ್ನು ಎತ್ತಿಕೊಂಡು ಹೋಗಬೇಕಾಗುತ್ತದೆ ಎಂದಿದ್ದಾರೆ.
ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದ ಚುನಾವಣೆ ಎದುರಿಸಲಿದ್ದೇವೆ ಎಂದು ಚುನಾವಣೆ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಸೇರಿ ಒಂದು ತೀರ್ಮಾನ ಮಾಡಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದರಿಸಲಿದ್ದೇವೆ ಎಂದಉ ಸ್ಪಷ್ಟನೆ ನೀಡಿದ್ದಾರೆ.