ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಲ್ಲಿ ಭಾರತೀಯರು ಸಿಕ್ಕಿ ಬಿದ್ದಿದ್ದು, ಇಲ್ಲಿನ ಪೋಷಕರು ಚಿಂತನೆಗೊಳಗಾಗಿದ್ದಾರೆ. ಇನ್ನು ಸರ್ಕಾರ ಕೂಡ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು, ವಿದ್ಯಾರ್ಥಿಗಳನ್ನ ತರಲು ನಿರತ ಪ್ರಯತ್ನ ಮಾಡುತ್ತಾ ಇದೆ.

ಈಗಾಗಲೇ 1,158 ಭಾರತೀಯರು ನಮ್ಮ ದೇಶ ತಲುಪಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ಕರ್ನಾಟಕದವರು 300 ಜನ ಉಕ್ರೇನ್ ನಲ್ಲಿದ್ಸಾರೆ. ಅವರೆಲ್ಲರನ್ನು ಗುರುತಿಸಿದ್ದೇವೆ.

ಯಾವುದೇ ರೀತಿಯಲ್ಲೂ ಆತಂಕ ಬೇಡ. ಪ್ರತಿಯೊಬ್ಬರನ್ನೂ ಕರೆತರಲಾಗುತ್ತಿದೆ. ಪ್ರಧಾನಿ ಅವರು ಕೂಡ ಶಕ್ತಿಮೀರಿ ಪ್ರಯತ್ನ ಮಾಡ್ತಿದ್ದಾರೆ. ಕನ್ನಡಿಗರನ್ನ ರಕ್ಷಿಸಲು ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿಂದೆಲ್ಲ ಪ್ರತಿ ದಿನ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಭಾರತೀಯರು ಉಕ್ರೇನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಇನ್ನೆರಡು ಮೂರು ದಿನದಲ್ಲಿ ಎಲ್ಲವೂ ಸರಿಯಾಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.

