ದಾವಣಗೆರೆ: ಮೊದಲೇ ರಾಜ್ಯದಲ್ಲಿ ಸಿಎಂ ಇದ್ದರೂ ಕೂಡ ನೆಕ್ಸ್ಟ್ ಸಿಎಂ ನಾನು.. ಮುಂದಿನ ಮುಖ್ಯಮಂತ್ರಿಯಾಗುತ್ತೇನೆ.. ನಾನು ಮುಖ್ಯಮಂತ್ರಿಯಾಗಲು ಅರ್ಹ ಎಂದೆಲ್ಲಾ ಸ್ಪರ್ಧೆಗೆ ನಿಂತಿದ್ದಾರೆ. ಇದರ ನಡುವೆ ಸ್ವಾಮೀಜಿಯೊಬ್ಬರು ಮುಂದಿನ ಮುಖ್ಯಮಂತ್ರಿ ಇವರೇ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ದಾವಣಗೆರೆ ಜಿಲ್ಲೆಯ ಆನಗೋಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಚರ್ಚೆಗೆ ಬಂದಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳು ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ ಸಿಎಂ ಆಗಲಿ ಎಂದೇ ಇಂಗಿತ ವ್ಯಕ್ತಪಡಿಸಿದ್ದಾರೆ. ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತಮ ನೇತಾರರಾಗುವ ಅರ್ಹತೆ ಇದೆ. ಮನಸ್ಸು ಮಾಡಿದರೆ ಮುಂದೆ ಅವರು ಕೂಡ ಸಿಎಂ ಆಗಬಹುದು. ಎಸ್.ಎಸ್. ಮಲ್ಲಿಕಾರ್ಜುನ ಅವರು ಕಳೆದ ಬಾರಿ ಸೋತಾಗ ಏಳು ಬೀಳು ಇದ್ದೇ ಇರುತ್ತದೆ ಎಂದು ಹೇಳಿದ್ದೆ. ಸೋತಾಗ ರಾಜಕೀಯ ಬೇಡ ಎಂದು ಮೌನಕ್ಕೆ ಶರಣಾಗಿದ್ದು, ಸನ್ಯಾಸಿಯಾಗಿ ಆಗಿದ್ದರು.
ನಾನು ಇಷ್ಟೆಲ್ಲ ಕೆಲಸ ಮಾಡಿದರು ಜನ ಕೈಹಿಡಿಯಲಿಲ್ಲ ಎಂದು ಬೇಸರ ಹೊರ ಹಾಕಿದ್ದರು. ಆಗ ಸೋತಾಗ ನಿಮ್ಮ ಕೆಲಸದ ಜೊತೆಗೆ ಜನರಿಂದಿಗೆ ಇರುವಂತೆ ಹೇಳಿದ್ದೆ. ಅವರು ಮನಸ್ಸು ಮಾಡಿದರೆ ಸಿಎಂ ಆಗಬಹುದು ಎಂದು ಸಾಣೇಹಳ್ಳಿ ಸ್ವಾಮೀಜಿ ಮಾತಿಗೆ ದಾವಣಗೆರೆ ಮಂದಿ ಕೂಡ ಹೌದು ಹೌದು ಎಂದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಶಾಸಕ ಶಾಮನೂರು ಬಿಟ್ಟರೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಉತ್ತಮ ನಾಯಕರು ಎನಿಸಿಕೊಳ್ಳುತ್ತಾರೆ ಅವರು ಸಿಎಂ ಆದರೆ ಎಲ್ಲಾ ವರ್ಗದವರಿಗೂ ಸಮಾನ ನ್ಯಾಯ ನೀಡುತ್ತಾರೆ ಎಂಬುದು ಹಲವರು ಅಭಿಪ್ರಾಯ ಪಟ್ಟಿದ್ದಾರೆಂದು ಸಾಣೇಹಳ್ಳಿ ಸ್ವಾಮೀಜಿ ಹೇಳಿದ್ದಾರೆ.