ಬೆಂಗಳೂರು: ನಮ್ಮನ್ನಾಳುವ ಸರ್ಕಾರದಿಂದ ಜನ ಬಯಸೋದು ಸಮಸ್ಯೆಗಳಿಗೊಂದು ಪರಿಹಾರ. ಆದರೆ ಎಲೆಕ್ಷನ್ ಆದ ಮೇಲೆ ಜನರತ್ತ ತಿರುಗಿಯೂ ನೋಡಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಇದೀಗ ಜನರ ಸಮಸ್ಯೆಗಳನ್ನು ಕೇಳುವುದಕ್ಕೆ ಸುಲಭ ಮಾರ್ಗದಲ್ಲಿ ನಿಂತಿದೆ. ಜನರು ತಮಗೆ ಏನೇ ಸಮಸ್ಯೆಗಳಿದ್ದರು, ಅದನ್ನು ನೇರವಾಗಿ ಸರ್ಕಾರಕ್ಕೆ ಹೇಳಬಹುದು. ಅದಕ್ಕಾಗಿ ಹೊಸದಾಗಿ ಟ್ವಿಟ್ಟರ್ ಖಾತೆಯನ್ನು ತೆರೆಯಲಾಗಿದೆ.
ಸಿಎಂ ಕರ್ನಾಟಕ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಈ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವುದು ಈಗ ಸುಲಭ.
ಈ ಟ್ವಿಟ್ಟರ್ ಖಾತೆಗೆ ಬಂದ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿಗಳು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. Office of the OSD to CM Karnataka ಈ ಟ್ವಿಟ್ಟರ್ ಖಾತೆಗೆ ನಿಮ್ಮ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಮಾರ್ಗ ಹುಡುಕಲಾಗಿದೆ.