ನೀತಾ ಅಂಬಾನಿ ಹಾಕಿದ್ದ ನೆಕ್ಲೇಸ್ 500 ಕೋಟಿ ಅಂತೆ..!

ಮುಖೇಶ್ ಅಂಬಾನಿ ಮಗನ ಪ್ರಿವೆಡ್ಡಿಂಗ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮೂರು ದಿನಗಳ ಕಾಲ ಈ ಅದ್ದೂರಿ ಕಾರ್ಯಕ್ರಮದಲ್ಲಿ ಹಲವು ಭಾವನಾತ್ಮಕ ಸನ್ನಿವೇಶಗಳು ಅನಾವರಣವಾಗಿದ್ದವು. ಈಗ ಆ ಅದ್ದೂರಿತನಕ್ಕೆ ತೆರೆ ಬಿದ್ದಿದೆ. ಈ ಮೂರು ದಿನವೂ ಗಂಡು – ಹೆಣ್ಣಿನ ಜೊತೆಗೆ ನೀತೂ ಅಂಬಾನಿ ಕೂಡ ಹೈಲೇಟ್ ಆಗಿದ್ದಾರೆ. ಕ್ಲಾಸಿಜ್ ಹಾಗೂ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದಾರೆ.

ಮದುವೆಯ ಮೂರನೇ ದಿನ ನೀತೂ ಅಂಬಾನಿ ಹಾಕಿದ್ದ ನೆಕ್ಲೆಸ್ ಎಲ್ಲರ ಕಣ್ಮನ ಸೆಳೆದಿದೆ. ಹಸಿರು ಕಲರ್ ನ ಡಬಲ್ ಪೆಂಡೆಂಟ್ ಇರುವ ವಜ್ರಾಭರಣ ಇದಾಗಿದೆ. ಈ ನೆಕ್ಲೇಸ್ ಬೆಲೆ ಕೇಳಿದರೇನೆ ಶಾಕ್ ಆಗಬೇಕು ಆ ಮಟ್ಟಿಗೆ ಇದೆ. ಮೂಲಗಳ ಪ್ರಕಾರ ಆ ನೆಕ್ಲೆಸ್‌ಬೆಲೆ 400 ರಿಂದ 500 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಅದರ ಜೊತೆಗೆ ವಜ್ರದುಂಗುರ ಧರಿಸಿದ್ದರು. ಅದು ಕೂಡ 40 ಕೋಟಿ ಎನ್ನಲಾಗಿದೆ.

 

ಮಗನ ಮದುವೆಗಾಗಿ ನೀತೂ ಅಂಬಾನಿ ಕಾಸ್ಟ್ಯೂಮ್ ಕೂಡ ರಾಯಲ್ ಆಗಿನೆ ರೆಡಿ ಮಾಡಲಾಗಿತ್ತು. ಮನೀಶ್ ಮಲ್ಹೋತ್ರಾ ಅವರಿಂದ ತಯಾರಿಸಿದ ಡ್ರೆಸ್ ಗಳನ್ನೇ ಧರಿಸಿದ್ದರು. ಕ್ಲಾಸಿಕಲ್ ಹಾಗೂ ರಾಯಲ್ ಲುಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಸೀರೆ ಹಾಗೂ ಗೌನ್ ಗಳನ್ನು ತೊಟ್ಟು ಮಹಾರಾಣಿಯಂತೆ ಕಾಣಿಸುತ್ತಿದ್ದರು. ಮಲ್ಹೋತ್ರಾ ಸಿದ್ದ ಮಾಡಿದ್ದ ಸೀರೆ ಹಾಗೂ ನೆಕ್ಲೆಸ್ ನಲ್ಲಿ ನೀತೂ ಅಂಬಾನಿ ಕಂಗೊಳಿಸಿದ್ದರು.

ಇನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ದೇಶದ ಸೆಲೆಬ್ರೆಟಿಗಳು ಮಾತ್ರವಲ್ಲ, ವಿದೇಶಗಳಿಂದಾನೂ ಸೆಲೆಬ್ರೆಟಿಗಳು ಹಾಜರಾಗಿದ್ದರು. ಕೆಲವೊಂದಿಷ್ಟು ಸೆಲೆಬ್ರೆಟಿಗಳು ಮೂರು ದಿನಗಳು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *