ಶಿವಮೊಗ್ಗ: ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಹಾರಿಸಬಹುದು ಎಂದು ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಫುಲ್ ಗರಂ ಆಗಿದ್ದಾರೆ. ದೇಶದ್ರೋಹದ ಹೇಳಿಕೆ ನೀಡಿದ್ದ ಈಶ್ವರಪ್ಪ ಅವರನ್ನ ವಜಾಗೊಳಿಸುವಂತೆ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸಚಿವ ಈಶ್ವರಪ್ಪ ರಾಷ್ಟ್ರ ಧ್ವಜ ನನ್ನ ತಾಯಿಯಿದ್ದಂತೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ ಅಷ್ಟೇ. ರಾಷ್ಟ್ರ ಧ್ವಜ ನನಗೆ ತಾಯಿ ಸಮಾನ ಯಾರಾದರೂ ಇದಕ್ಕೆ ಅಪಮಾನ ಮಾಡುವ ಹೇಳಿಕೆ ನೀಡಿದರೆ ಅವರು ರಾಷ್ಟ್ರದ್ರೋಹಿ ಎನಿಸಿಕೊಳ್ಳುತ್ತಾರೆ. ಇದನ್ನ ನಾನು ಮೊದಲೇ ಸ್ಪಷ್ಟಪಡಿಸಿದ್ದೇನ ಎಂದಿದ್ದಾರೆ.
ಎರಡು ಪಕ್ಷದವರು ಜನರ ಬಳಿ ಹೋಗೋಣಾ. ರಾಷ್ಟ್ರ ಧ್ವಜದ ಬಗ್ಗೆ ಅವರೇ ತೀರ್ಮಾನಿಸುತ್ತಾರೆ. ಮತ್ತೊಮ್ಮೆ ನಾನು ಈ ಬಗ್ಗೆ ಮಾತಾಡಲ್ಲ. ವಿಧಾನಸಭಾ ಕಲಾಪದಲ್ಲಿ ಈ ವಿಚಾರವನ್ನ ಕೈಬಿಡಿ. ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.