Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಳ್ಳಕೆರೆಯಲ್ಲಿ ಕಟಾವಿಗೆ ಬಂದಿದ್ದ ಸೌತೆ ಬೆಳೆಯನ್ನ ಹಾಳು ಮಾಡಿದ ಕಿಡಿಗೇಡಿಗಳು..!

---Advertisement---

ಚಿತ್ರದುರ್ಗ: ಒಮ್ಮೊಮ್ಮೆ ಮನುಷ್ಯ ಎಷ್ಟು ಕೆಟ್ಟವನಾಗ್ತಾನೆ ಅಂದ್ರೆ ದ್ವೇಷದ ಜ್ವಾಲೆಗೆ ಸಿಲುಕಿ ಬೆಳೆಯನ್ನು ನಾಶ ಮಾಡ್ತಾನೆ. ಅಂಥದ್ದೇ ಘಟನೆ ಇದೀಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ. ಹೊಟ್ಟೆಜ್ಜನ ಕಪ್ಲೆ ಗ್ರಾಮದ ರೈತ ನಾಗರಾಜು ಅವರ ಜಮೀನನಲ್ಲಿ ಬೆಳೆದಿದ್ದ ಬೆಳೆಯನ್ನ ನಾಶ ಮಾಡಿದ್ದಾರೆ.

ಇನ್ನೇನು ಸೌತೆಕಾಯಿಯನ್ನ ಕಟಾವು ಮಾಡಬೇಕು ಎಂದುಕೊಂಡಿದ್ದ ರೈತ ನಾಗರಾಜ್ ಗೆ ಈ ದೃಶ್ಯ ನೋಡಿ ಶಾಕ್ ಆಗಿದ್ದಾನೆ. ನಾಗರಾಜ್ ಅವರು ತಮ್ಮ ಒಂದು ಎಕರೆ ಏಳು ಗುಂಟರ ಜಾಗದಲಗಲಿ ಬಳ್ಳಾರಿ ಸೌತೆ ಬೆಳೆದಿದ್ದರು. ಅದಕ್ಕೆ ಸುಮಾರು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದರು. ರೈತನ ಶ್ರಮಕ್ಕೆ ತಕ್ಕ ಹಾಗೇ ಫಸಲು ಕೂಡ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸೌತೆಕಾಯಿಯನ್ನು ಕಿತ್ತು ಮಾರಾಟ ಮಾಡಬೇಕಾಗಿತ್ತು. ಅದಕ್ಕೆ ಸಿದ್ಧತೆಯೂ ನಡೆದಿತ್ತು. ಬೇಸಿಗೆ ಬೇರೆ ಸೌತೆಕಾಯಿಗೆ ಒಳ್ಳೆ ಡಿಮ್ಯಾಂಡ್ ಇದ್ದ ಕಾರಣ ಒಳ್ಳೆ ಲಾಭ ಬರುವ ನಿರೀಕ್ಷೆಯೂ ಇತ್ತು.

ಅಚ್ಚ ಹಸಿರಿನಿಂದ ಸೌತೆಕಾಯಿ‌ ಬೆಳೆ ಕಂಗೊಳಿಸ್ತಾ ಇತ್ತು. ಆದರೆ ಬೆಳಗ್ಗೆ ಬಂದು ನೋಡಿದರೆ ಎಲ್ಲವೂ ಬಾಡಿ ಹೋಗಿತ್ತು. ಯಾರೋ ಕಿಡಿಗೇಡಿಗಳು ಬೆಳೆ ನಾಶಕ ಔಷಧ ಸಿಂಪಡಿಸಿ ಹೋಗಿದ್ದರು. ಈ ದೃಶ್ಯ ಕಂಡ ಆ ರೈತನ ಸ್ಥಿತಿ ಹೇಗಾಗಿರಬೇಡ ಹೇಳಿ. ಏನೇ ದ್ವೇಷ ಇದ್ದರು ಬೆಳೆಯನ್ನ ಆ ರೀತಿ ಹಾಳು ಮಾಡುವ ಕೆಟ್ಟ ಮನಸ್ಥಿತಿ ಇರಬಾರದು. ಇದರಿಂದ ರೈತ ನಾಗರಾಜ್ ಗೆ ದೊಡ್ಡ ಮಟ್ಟದ ಹೊಡೆತವೇ ಬಿದ್ದಂತೆ ಆಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...