ಬೆಂಗಳೂರು: ಉಸ್ತುವಾರಿ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದ ವಿಚಾರವಾಗಿ ಸರ್ಕಾರದ ವಿರುದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ. ಯಾವ ಸಚಿವರೂ ನೆರೆ ಪ್ರದೇಶಕ್ಕೆ ಹೋಗಿದ್ದು ನೋಡಿಲ್ಲ. ಬರೀ ಕಾಟಾಚಾರಕ್ಕೆ ಹೇಳಿಕೆ ಕೊಡ್ತಾರೆ.
ಬಿಜೆಪಿ ಸರ್ಕಾರ ಸಿಎಂ ಮಂತ್ರಿಗಳಿಗೆ ಜನರ ಬಗ್ಗೆ ಇರೋ ಬದ್ದತೆ ತೋರಿಸುತ್ತದೆ. ಮಳೆ ಆಗುವ ಟೈಮಲ್ಲಿ ಯಾರೂ ಪ್ರವಾಸ ಮಾಡ್ತಿಲ್ಲ. ಸಂಬಂಧಿಸಿದ ಸಚಿವರು ಇರೋದು ಯಾಕೆ?. ಜನರ ನೆರವಿಗೆ ಬರಬೇಕು ಇವರು. ಬರೇ ಆ ಸಂದರ್ಭದಲ್ಲಿ ಅಷ್ಡು ಕೊಡ್ತೀವಿ ಇಷ್ಡು ಕೊಡ್ತೀವಿ ಅಂತಾರೆ.
ಕೃಷ್ಣ ಬೇಸಿನ್ ನಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಹಿಂದೆ ಆಗಿದ್ದಕ್ಕೂ ಯಾವ ಪರಿಹಾರ ಕೊಡ್ತಿಲ್ಲ. ಜನರು ಪಾಪ ತತ್ತರಿಸಿ ಹೋಗಿದ್ದಾರೆ. ಜನರಿಗೆ ಏನೂ ಸಹಾಯ ಆಗಿಲ್ಲ ಬೇಕಿದ್ದರೆ ಫ್ಯಾಕ್ಟ್ ಚೆಕ್ ಮಾಡಿ. ಗಂಜಿ ಕೇಂದ್ರ ಆಗಿದ್ದು ಬಿಟ್ಟರೆ ಏನೂ ಆಗಿಲ್ಲ. ಈ ಸಂದರ್ಭದಲ್ಲಿ ನೀವು ಹೋಗದಿದ್ದರೆ ಇನ್ನು ಯಾವಾಗ ಹೋಗ್ತೀರಿ? ಎಂದು ಕಿಡಿಕಾರಿದ್ದಾರೆ.