ಹಾವೇರಿ: ರೆಸಾರ್ಟ್ ರಾಜಕೀಯ ಶುರುವಾಗಿ ಹಲವು ವರ್ಷಗಳೇ ಆಯ್ತು. ದೊಡ್ಡ ಮಟ್ಟದ ರಾಜಕೀಯ ವಿಚಾರಕ್ಕೆ ನಡೆಯುತ್ತಿದ್ದ ರೆಸಾರ್ಟ್ ರಾಜಕೀಯ ಈಗ ಗ್ರಾಮ ಪಂಚಾಯತಿಗೂ ಬಂದು ನಿಂತಿರುವುದು ಅತ್ಯಾಶ್ಚರ್ಯವಾಗಿದೆ. ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯಲ್ಲಿ.
ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ದೇವರಗುಡ್ಡ ಗ್ರಾಮ ಪಂಚಾಯತಿ ರೆಸಾರ್ಟ್ ರಾಜಕೀಯ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಮಾಲತೇಶ್ ದುರ್ಗಪ್ಪ ಆಯ್ಕೆಯಾಗಿದ್ದಾರೆ. ಇವರನ್ನು ಕೆಳಗಿಳಿಸುವುದಕ್ಕೆ 13 ಸದಸ್ಯರು ಡಿಸೈಡ್ ಮಾಡಿದ್ದಾರೆ. ಅದರ ಪರಿಣಾಮವಾಗಿ, 40 ದಿನಗಳಿಂದ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈಗ ತಮ್ಮ ಗ್ರಾಮ ಪಂಚಾಯತಿಗೆ ವಿಮಾನ ಮೂಲಕ ಆಗಮಿಸಿದ್ದಾರೆ. ಅಧಿಕಾರಕ್ಕೂ ಮುನ್ನ ಕೆಲವೊಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. 15 ತಿಂಗಳುಗಳ ಕಾಲವಷ್ಟೇ ಅಧಿಕಾರದಲ್ಲಿ ಇರುವುದಾಗಿ. ಆದ್ರೆ ಅಧಿಕಾರವನ್ನು ಬಿಟ್ಟು ಕೊಡದ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ ರೆಸಾರ್ಟ್ ನಲ್ಲಿ ಕೂತಿದ್ದ ಸದಸ್ಯರು ಈಗ ಗ್ರಾಮ ಪಂಚಾಯತಿಗೆ ಬಂದಿದ್ದಾರೆ.